➤ಮಂಗಳೂರು : ತೋಟದ ಕೆಲಸಗಾರನ ಭೀಕರ ಹತ್ಯೆ!

(ನ್ಯೂಸ್ ಕಡಬ) newskadaba.com ಮಂಗಳೂರು , ಡಿ. 20 ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ನಡೆದಿದೆ. ಎ.ಸಿ.ಕುರಿಯನ್ ಮಾಲಿಕತ್ವದ ಸಾರ ಫಾರ್ಮ್ ತೋಟದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ (30) ಕೊಲೆಯಾದ ದಲಿತ. ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆಕೆ ಆನಂದ ಪೂಜಾರಿ, ಮಹೇಶ್ ಪೂಜಾರಿ ಕೊಲೆ ಮಾಡಿರುವ ಆರೋಪಿಗಳು.

ಶ್ರೀಧರ ಮೇಲೆ ಕೆಲ ದಿನಗಳ ಹಿಂದೆ  ನಾಲ್ವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ವೇಳೆ ತೋಟದ ಸಿಬ್ಬಂದಿ ಅಬ್ರಾಹಂ ಮತ್ತು ಪರಮೇಶ್ವರ್ ರಕ್ಷಣೆ ಮಾಡಿದ್ದರು. ಇದಾದ ನಂತರ ಏಟು ತಿಂದ ಶ್ರೀಧರ ವಿಶ್ರಾಂತಿ ಪಡೆಯುತ್ತಿದ್ದನು. ಈ ವೇಳೆ ಆರೋಪಿಗಳು ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿ ತುಂಡರಿಸಿ ಬಂದು, ಕೊಲೆ ಮಾಡಿ ತೋಟದ ಅಣತೆ ದೂರದಲ್ಲಿ ಎಸೆದಿದ್ದಾರೆ. ಜೊತೆಗೆ ಕೊಲೆಯಾದ ಶ್ರೀಧರ ಬಳಿ ಇದ್ದ 9500 ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ.

Also Read  ಕೊಳದಲ್ಲಿ ಈಜುತ್ತಿದ್ದ 41 ವರ್ಷದ ವ್ಯಕ್ತಿ ಮೃತ್ಯು

error: Content is protected !!
Scroll to Top