ಅಬಕಾರಿ ಇಲಾಖೆಯ ಪುತ್ತೂರು ಹಾಗೂ ಬಂಟ್ವಾಳ ಉಪ ವಿಭಾಗ ► ನ.27 ಮತ್ತು 28 ರಂದು ಮುಟ್ಟುಗೋಲು ವಾಹನಗಳ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ನ.25. ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಬಂಟ್ವಾಳ ತಾಲೂಕಿಗೆ ಸಂಬಂಧಿಸಿದಂತೆ 4 ತ್ರಿಚಕ್ರ ವಾಹನ, 3 ಚತುರ್‍ಚಕ್ರ ವಾಹನ ಮತ್ತು 1 ದ್ವಿಚಕ್ರ ವಾಹನಗಳನ್ನು ನವೆಂಬರ್ 27 ರಂದು ಹಾಗೂ ಪುತ್ತೂರು ತಾಲೂಕಿಗೆ ಸಂಬಂಧಿಸಿದಂತೆ 3 ತ್ರಿಚಕ್ರ ವಾಹನಗಳು, 6 ದ್ವಿಚಕ್ರ ವಾಹನಗಳು ಹಾಗೂ ಚತುರ್‍ಚಕ್ರ 1 ನವೆಂಬರ್ 28 ರಂದು ಬಹಿರಂಗ ಹರಾಜಿಗೆ ಒಳಪಡಿಸಲಾಗುವುದು.

ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಹರಾಜು ನಿರ್ವಾಹಣಾ ಅಧಿಕಾರಿಗಳಾದ ಬಂಟ್ವಾಳ ತಾಲೂಕಿಗೆ ಸಂಬಂಧಿಸಿದಂತೆ ಅಬಕಾರಿ ಉಪ ಅಧೀಕ್ಷಕರು, ಬಂಟ್ವಾಳ ಉಪ ವಿಭಾಗ ಪದ್ಮ ವಿ. (ಮೊಬೈಲ್: 9449597107) ಹಾಗೂ ಪುತ್ತೂರು ತಾಲೂಕಿಗೆ ಸಂಬಂಧಿಸಿದಂತೆ ಅಬಕಾರಿ ಉಪ ಅಧೀಕ್ಷಕರು, ಪುತ್ತೂರು ಉಪ ವಿಭಾಗ, ಪುತ್ತೂರು ಹೆಚ್.ಒ ಮುರಳೀಧರ (ಮೊಬೈಲ್: 9449597111) ಇವರನ್ನು  ಸಂಪರ್ಕಿಸಬಹುದಾಗಿ ದ.ಕ ಜಿಲ್ಲಾ ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.

Also Read  ಕಡಬದಲ್ಲಿ ಆನೆ ದಾಳಿ ಪ್ರಕರಣ; ವಿಧಾನ ಸಭೆ ಅಧಿವೇಶನದ ವಿಷಯ ಪ್ರಸ್ತಾಪ ➤ ಶಾಸಕ ಯು.ಟಿ ಖಾದರ್

error: Content is protected !!
Scroll to Top