➤ಗದಗ : ವಿದ್ಯಾರ್ಥಿಯನ್ನು ಮೊದಲ ಮಹಡಿಯಿಂದ ಎಸೆದು ಕೊಲೆಗೈದ ಪಾಪಿ ಶಿಕ್ಷಕ!

(ನ್ಯೂಸ್ ಕಡಬ) newskadaba.com ಗದಗ  ಡಿ. 20  ಗದಗ: ಶಾಲಾ ಶಿಕ್ಷಕನೋರ್ವ 4ನೇ ತರಗತಿ ವಿದ್ಯಾರ್ಥಿಯನ್ನು ಥಳಿಸಿ, ಬಳಿಕ ಶಾಲೆಯ ಮೊದಲನೇ ಮಹಡಿಯಿಂದ ಎಸೆದು ಕೊಲೆ ಮಾಡಿರುವ ಘಟನೆ ಗದಗ  ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ 10 ವರ್ಷದ ಬಾಲಕ ಮೃತಪಟ್ಟಿದ್ದು, ಶಾಲೆಯಲ್ಲಿ ಪಾಠ ಮಾಡಲು ನಿಯೋಜನೆ ಮಾಡಿದ್ದ ಅತಿಥಿ ಶಿಕ್ಷಕನೊಬ್ಬ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಘಟನೆ ನಡೆದಿದ್ದು, ಮೃತ ಬಾಲಕನನ್ನು ಭರತ್ ಎಂದು ಗುರುತಿಸಲಾಗಿದೆ. ಘಟನೆ ಕುರಿತಂತೆ ಗದಗ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಘಟನೆಯೂ ಕೌಟುಂಬಿಕ ಕಲಹದಿಂದ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

Also Read  ಮಂಜೇಶ್ವರ: ಗಾಂಜಾ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಾಲ್ವರ ಬಂಧನ

error: Content is protected !!
Scroll to Top