➤ ಮದುವೆ ದಿಬ್ಬಣದ ಬಸ್ ಕಂಟೈನರ್ ಗೆ ಡಿಕ್ಕಿ ➤ ಬಸ್ ಚಾಲಕ ಮೃತ್ಯು

ನ್ಯೂಸ್ ಕಡಬ) newskadaba.com, ಮುಂಬೈ ಡಿ. 19 ಮದುವೆ ದಿಬ್ಬಣದ ಬಸ್’ಗೆ ಹಿಂಬದಿಯಿಂದ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು,  10 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಮದುವೆ ಸಮಾರಂಭ ಮುಗಿಸಿ ಸಿಂಧುದುರ್ಗದಿಂದ ಶಹಪುರಕ್ಕೆ ಖಾಸಗಿ ಬಸ್​ ತೆರಳುತ್ತಿತ್ತು. ಬಸ್ ನಲ್ಲಿ ಸುಮಾರು 35 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಂಟೈನರ್ ಟ್ರಕ್ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಚಾಲಕ ಬಸ್​ನಿಂದ ಕೆಳಕ್ಕೆ ಬಿದ್ದು, ಟ್ರಕ್​ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಈ ಸಂಬಂಧ ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಂಗಳೂರು: ದಾಖಲೆಯಿಲ್ಲದೇ ಸಾಗಿಸುತ್ತಿದ್ದ 1.48 ಕೋಟಿ ರೂ. ಚಿನ್ನ, ನಗದು ವಶಕ್ಕೆ...!

 

error: Content is protected !!
Scroll to Top