ಕಲ್ಲಡ್ಕ: ಕೆರೆಗೆ ಬಿದ್ದು ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.24. ಏಳು ವರ್ಷದ ಬಾಲಕನೋರ್ವ ಕೆರೆಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಲ್ಲಡ್ಕ ಸಮೀಪದ ಉಮಾಶಿವಕ್ಷೇತ್ರ ದೇವಳದ ಸಮೀಪ ಶುಕ್ರವಾರದಂದು ನಡೆದಿದೆ.

ನೇರಳಕಟ್ಟೆ ಭಗವತಿಕೋಡಿ ನಿವಾಸಿ ಸತ್ಯನಾರಾಯಣ ಎಂಬವರ ಪುತ್ರ ಶ್ರೀರಾಮ್(7) ಮೃತ ದುರ್ದೈವಿ ಬಾಲಕ. ಉಮಾಶಿವ ಕ್ಷೇತ್ರದ ಸಭಾಂಗಣದಲ್ಲಿ ತನ್ನ ಅಜ್ಜನ ಶ್ರಾದ್ದಕ್ಕೆಂದು ಶ್ರೀರಾಮ್ ತನ್ನ ಮನೆಯವರ ಜೊತೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ಆಟವಾಡಲು ಇತರರ ಜೊತೆ ಕ್ಷೇತ್ರದ ಕೆರೆಯ ಬಳಿಗೆ ತೆರಳಿದ್ದ ಈತ ಹಠಾತ್ತನೆ ಆಯತಪ್ಪಿ ಬಿದ್ದಿದ್ದಾನೆ. ತಕ್ಷಣ ಆತನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆ ಮೃತಪಟ್ಟಿದ್ದಾನೆ.

Also Read  ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವದಿಂದ ಅನರ್ಹ    ➤ ಸಚಿವಾಲಯ ಅಧಿಸೂಚನೆ

ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ 2ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ. ಘಟನೆ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top