➤ ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ದಲ್ಲಿ ಹೆಚ್ಚಳ ➤ ರಾಜ್ಯ ಸರ್ಕಾರ ಆದೇಶ

ನ್ಯೂಸ್ ಕಡಬ) newskadaba.com ಬೆಂಗಳೂರು , ಡಿ. 19  ಬೆಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಮಾಸಿಕ ಗೌರವಧನವನ್ನು ಹೆಚ್ಚಳಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2017 ರ ಮೇ 5ರ ಆದೇಶದಂತೆ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ನೀಡುತ್ತಿದ್ದ ಮಾಸಿಕ ಗೌರವಧನವನ್ನು ಇದೀಗ ದ್ವಿಗುಣಗೊಳಿಸಿ ಸರಕಾರ ಆದೇಶಿಸಿದೆ.  ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿ ಎಂ.ಎಸ್.ಬಾನೊಳಿ ಅವರು ಡಿ.18ರಂದು ಆದೇಶ ಹೊರಡಿಇದ್ದಾರೆ.

Also Read  ಇಂದಿನ ಹವಮಾನ

error: Content is protected !!
Scroll to Top