ಬೀಜಿಂಗ್ :  ಕೊರೋನಾ ಮತ್ತೆ ಮರಣ ಮೃದಂಗ   

(ನ್ಯೂಸ್ ಕಡಬ) newskadaba.com  ಬೀಜಿಂಗ್, ಡಿ.18  ಚೀನಾದಲ್ಲಿ ಮತ್ತೆ ಕೊರೋನಾ ಮರಣ ಮೃದಂಗ ಶುರುವಾಗಿದ್ದು ಕಳೆದ ಒಂದು ವಾರದಲ್ಲಿ ಸಾವಿನ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

ಚೀನಾ ರಾಜಧಾನಿ ಬೀಜಿಂಗ್ ನ ಶವಾಗಾರಗಳ ಮುಂದೆ ಕ್ಯೂ ನಿಲ್ಲುವ ಸ್ಥಿತಿ ಎದುರಾಗಿದ್ದು, ಶವ ಸಂಸ್ಕಾರಕ್ಕೆ 3 ದಿನ ಕ್ಯೂ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.

ಪ್ರತಿದಿನ 30-40 ಸಾವಿರ ಮಂದಿಗೆ ಸೋಂಕು ಹರಡುತ್ತಿದೆ. ನಿತ್ಯ ನೂರಾರು ಮಂದಿ ಸಾವನ್ನಪ್ಪುತ್ತಿರುವ ಮಾಹಿತಿ ಲಭ್ಯವಾಗಿದ್ದು, ಪ್ರತಿದಿನ ಶವಾಗಾರಕ್ಕೆ 200-300 ಶವಗಳು ಬರುತ್ತಿದ್ದು, ಕೊರೋನಾ ಕೇಸ್ ಹಾಗೂ ಸಾವಿನ ಪ್ರಮಾಣ ಹೆಚ್ಚಳದಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ ಎನ್ನಲಾಗಿದೆ.

Also Read  ಅಜ್ಜಿಗೆ ಗುಂಡಿಟ್ಟ 6 ವರ್ಷದ ಬಾಲಕಿ!!

                                         

error: Content is protected !!
Scroll to Top