ಕೈಕಂಬ ಸರಕಾರಿ ಶಾಲೆಯ ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ನ.24. ತಾ.ಪಂ. ಅನುದಾನದಲ್ಲಿ ಬಿಳಿನೆಲೆ ಗ್ರಾಮದ ಕೈಕಂಬ ಹಿ.ಪ್ರಾ. ಶಾಲಾ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ತಾ.ಪಂ.ಅನುದಾನದಲ್ಲಿ ಮಂಜೂರಾದ ರೂ.70 ಸಾವಿರದಲ್ಲಿ ತಾ.ಪಂ.ಸದಸ್ಯೆ ಆಶಾಲಕ್ಷ್ಮಣ್ ಗುಂಡ್ಯ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಅತೀ ಶೀಘ್ರದಲ್ಲಿ ನಡೆದು ಶಾಲೆಗೆ ಸಂಪರ್ಕ ರಸ್ತೆ ಅಭಿವೃದ್ದಿಯಾಗಲಿ ಎಂದು ಆಶಿಸಿದರು.

ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ತೆಂಗಿನಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಬಿಳಿನೆಲೆ ಗ್ರಾ.ಪಂ.ಸದಸ್ಯ ಶಿವಪ್ರಸಾದ್ ನಡುತೋಟ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ನೀಲಪ್ಪ ಗೌಡ ಕಳಿಗೆ, ಬಿಳಿನೆಲೆ ಶ್ರೀಗೋಪಾಲಕೃಷ್ಣ ಪ್ರೌಢಶಾಲಾ ಎಸ್ಡಿಎಂಸಿ ಅಧ್ಯಕ್ಷ ಶಶಿಧರ್ ಬೊಟ್ಟಡ್ಕ, ಗುತ್ತಿಗೆದಾರ ಕ್ಷೇವಿಯರ್ ಬೇಬಿ, ಕೈಕಂಬ ಶಾಲಾ ಮುಖ್ಯಗುರುಗಳಾದ ಶಾರದಾ ಪಿ, ಶಿಕ್ಷಕರಾದ ಪುಷ್ಪಾವತಿ ಕೆ.ಬಿ, ಅಂಬಿಕಾ ಎನ್, ವನಿತಾ ಕೆ, ಸಿದ್ದಲಿಂಗಸ್ವಾಮಿ ಡಿ.ಎಸ್, ಪವಿತ್ರ ಎ. ಉಪಸ್ಥಿತರಿದ್ದರು.

Also Read  ಸವಣೂರು: ಹಿಂಸಾತ್ಮಕವಾಗಿ ಗೋ ಸಾಗಾಟ ➤ ವಾಹನ ಸಹಿತ 2 ಗೋವುಗಳು ಪೊಲೀಸರ ವಶಕ್ಕೆ

error: Content is protected !!
Scroll to Top