ರೇಬಿಸ್ ಖಾಯಿಲೆಗೆ ತುತ್ತಾಗಿ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ. 17. ಕೆಲದಿನಗಳ ಹಿಂದೆ ಮನೆಯ ಮುಂದೆ ಆಟವಾಡುತ್ತಿದ ಕರ್ಲಗದ್ದೆ ರಮೇಶ್ ಎಂಬವರ ಪುತ್ರ ಪ್ರಧಾನ್ (12) ಎಂಬ ಬಾಲಕನಿಗೆ ಬೀದಿ ನಾಯಿ ದಾಳಿ ಮಾಡಿತ್ತು. ಮನೆಯವರು ಸೂಕ್ತ ಚಿಕಿತ್ಸೆ ಕೊಡಿಸಿರಲಿಲ್ಲ ಎನ್ನಲಾಗಿದೆ.

 

ನಂತರದಲ್ಲಿ ಬಾಲಕನಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ವೈದ್ಯರು ಬಾಲಕ ರೇಬಿಸ್ ಕಾಯಿಲೆಗೆ ತುತ್ತಾಗಿದ್ದಾನೆ ಎಂದು ತಿಳಿಸಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ ಎಂದೆನ್ನಲಾಗಿದೆ.

Also Read  18ವರ್ಷ ತುಂಬಿದವರು ಹಕ್ಕು ಚಲಾಯಿಸಲು ಅಪರ ಜಿಲ್ಲಾಧಿಕಾರಿ ಕರೆ

.

error: Content is protected !!
Scroll to Top