ನೀರಾನೆ ಬಾಯಿಯಿಂದ ಬದುಕಿಬಂದ ಪುಟ್ಟ ಪೋರ.. !

(ನ್ಯೂಸ್ ಕಡಬ) newskadaba.com ಉಗಾಂಡ, ಡಿ. 17. ಹಸಿದ ನೀರಾನೆಯೊಂದು 2 ವರ್ಷದ ಬಾಲಕನ್ನು ನುಂಗುತ್ತಿದ್ದಾಗ ದಾರಿಹೋಕನ ಕಲ್ಲೇಟಿಗೆ ಹೆದರಿ ಮಗುವನ್ನು ಹೊರ ಉಗುಳಿದ ಘಟನೆ ಆಫ್ರೀಕಾದ ಉಗಾಂಡದಲ್ಲಿ ನಡೆದಿದೆ.

 

ಕಾಡಿನಿಂದ ಬಂದ ನೀರಾನೆಯೊಂದು ರಸ್ತೆಯಲ್ಲಿ ಆಡುತ್ತಿದ್ದ 2 ವರ್ಷದ ಮಗುವನ್ನು ಬಾಯಿಯಲ್ಲಿ ಕಚ್ಚಿ ಇನ್ನೇನು ನುಂಗಬೇಕು ಅನ್ನುವ ಹೊತ್ತಿನಲ್ಲಿ ಅದೇ ರಸ್ತೆಯಲ್ಲಿ ಬಂದ ವ್ಯಕ್ತಿಯೊಬ್ಬರು ಕಲ್ಲು ಹೊಡೆದ ಪರಿಣಾಮ ಮಗುವನ್ನು ನೀರಾನೆ ಹೊರಕ್ಕೆ ಉಗುಳಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಗು ಸದ್ಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎನ್ನಲಾಗಿದೆ.

Also Read  ರಷ್ಯಾದ ಚಂದ್ರಯಾನ ವಿಫಲ - ಸುದ್ದಿ ತಿಳಿದು ಅನಾರೋಗ್ಯಕ್ಕೆ ತುತ್ತಾದ ಹಿರಿಯ ವಿಜ್ಞಾನಿ

error: Content is protected !!
Scroll to Top