ಸುಳ್ಯ: ಮನೆಯ ಮೇಲೆ ಉರುಳಿ ಬಿದ್ದ ಬೋರ್‍ವೆಲ್ ಲಾರಿ ► ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಸುಳ್ಯ, ನ.24. ಬೋರ್‍ವೆಲ್ ಲಾರಿಯೊಂದು ಆಯತಪ್ಪಿ ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಯೊಂದರ ಮೇಲೆ ಬಿದ್ದ ಘಟನೆ ಸುಳ್ಯದ ಜಾಲ್ಸೂರಿನಲ್ಲಿ ಗುರುವಾರದಂದು ನಡೆದಿದೆ.

ಶಾಫಿ ಎಂಬವರ ಮನೆಯಲ್ಲಿ ಬೋರ್‍ವೆಲ್ ತೆಗೆಯಲೆಂದು ತೆರಳುತ್ತಿದ್ದ ಲಾರಿಯು ಜಾಲ್ಸೂರು ಗ್ರಾಮದ ಬೊಳುಬೈಲು ಎಂಬಲ್ಲಿಗೆ ತಲುಪಿದಾಗ ಇಕ್ಕಟ್ಟಾದ ರಸ್ತೆಯಲ್ಲಿ ಸಾಗುತ್ತಿದ್ದಾಗ ರವಿ ಎಂಬವರ ಕಾಂಪೌಂಡ್ ಕುಸಿದು ಬಿದ್ದು ನೂತನವಾಗಿ ನಿರ್ಮಿಸುತ್ತಿದ್ದ ಮನೆಯ ಮೇಲೆ ಬಿದ್ದಿದೆ.

ಘಟನೆಯಲ್ಲಿ ಮನೆಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

error: Content is protected !!

Join the Group

Join WhatsApp Group