ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ದಾಳಿ ಟ್ವೀಟ್ ➤ ಅಪರಿಚಿತ ವ್ಯಕ್ತಿ ಅಂದರ್

(ನ್ಯೂಸ್‌ ಕಡಬ) newskadaba.com ಬೆಂಗಳೂರು, ಡಿ. 16. ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಾಂಬ್ ಸ್ಫೋಟಿಸುತ್ತೇನೆ ಎಂದು  ಅಪರಿಚಿತ ವ್ಯಕ್ತಿಯೊರ್ವ ಟ್ವೀಟ್ ಮಾಡಿದ್ದು,  ಈ ಸಂಬಂಧ ಅಪರಿಚಿತ ಟ್ವಿಟ್ಟರ್ ಬಳಕೆದಾರನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಈತ ‘ನಾನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಡುತ್ತೇನೆ. ಇದರಿಂದ ನಗರಕ್ಕೆ ಇನ್ನೂ ಹತ್ತಿರದಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಬಹುದು ಎಂದು ಟ್ವೀಟ್ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Also Read  ಬೆಂಕಿ ಅವಘಡ ಮನೆಯಲ್ಲಿ ಮಹಿಳೆ ಸಜೀವ ದಹನ

error: Content is protected !!
Scroll to Top