ಪ್ರೀತಿ ವಿಚಾರಕ್ಕೆ ಜಗಳ- ಚೂರಿ ಇರಿತ

Crime

(ನ್ಯೂಸ್ ಕಡಬ) newskadaba.com ಕಲಬುರ್ಗಿ, ಡಿ. 15. ಪ್ರೀತಿ ಪ್ರೇಮದ ವಿಚಾರಕ್ಕೆ ನರ್ಸಿಂಗ್ ವಿದ್ಯಾರ್ಥಿಗೆ ಚಾಕು ಇರಿದಿರುವ ಘಟನೆ ನಗರದ ನೂರ್ ಬಾಗ್ ಕಾಲೋನಿಯಲ್ಲಿ ನಡೆದಿದೆ.

ಚಾಕು ಇರಿತಕ್ಕೆ ಒಳಗಾದ ವಿದ್ಯಾರ್ಥಿಯನ್ನು ಮಹಮ್ಮದ್ ಎಹ್ತೇಶಾಮ್ (19) ದು ಗುರುತಿಸಲಾಗಿದೆ. ಈತ ಕಲಬುರಗಿ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ಪ್ರಥಮ ವರ್ಷ ಓದುತ್ತಿದ್ದು, ತನ್ನ ಸಹಪಾಠಿಯ ಜೊತೆ ಪ್ರೇಮದಲ್ಲಿ ಬಿದ್ದಿದ್ದ. ಈ ವಿಚಾರಕ್ಕೆ ಮುಜಾಮಿಲ್ ಹಾಗೂ ಎಹೆತೇಶಾಮ್ ನಡುವೆ ಜಗಳ ನಡೆದಿದ್ದು, ಬಳಿಕ ಅದು ವಿಕೋಪಕ್ಕೆ ತಿರುಗಿ ಎಹ್ತೇಶಾಮ್ ಗೆ ಮುಝಮಿಲ್ ಚಾಕು ಇರಿದಿದ್ದಾನೆ. ಗಂಭೀರ ಗಾಯಗೊಂಡ ಎಹ್ತೇಶಾಮ್ ನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಸ್ ನಿಲ್ದಾಣದಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ ➤ ಓರ್ವನಿಗೆ ಗಾಯ

error: Content is protected !!
Scroll to Top