ಅಸ್ಸಾಂ ರೈಫಲ್ಸ್ ಗೆ ಸುಳ್ಯದ ರಕ್ಷಿತಾ ಎಂ.ಬಿ. ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 15. ತಾಲೂಕಿನಿಂದ ಕಳೆದ ಕೆಲವು ವರ್ಷಗಳಲ್ಲಿ ಹಲವು ಯುವತಿಯರು ದೇಶ ಸೇವೆಯ ಕಾಯಕಕ್ಕೆ ಸೇರಿಕೊಂಡಿದ್ದು, ಇದೀಗ ಐವರ್ನಾಡು ಗ್ರಾಮದ ರಕ್ಷಿತಾ ಎಂ.ಬಿ. ರವರು, ಮಿಲಿಟರಿ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಪಾಸಾಗಿ ಅಸ್ಸಾಂ ರೈಫಲ್ಸ್‌ ಗೆ ಆಯ್ಕೆಯಾಗಿದ್ದಾರೆ.


ಮೂಲತಃ ಧರ್ಮಸ್ಥಳ ಮೂಲದವರಾದ ರಕ್ಷಿತಾ ಎಂ.ಬಿ, ಭಾಸ್ಕರ ಗೌಡ ಮಡ್ತಿಲ ಹಾಗೂ ಮಮತಾ ದಂಪತಿಯ ಪುತ್ರಿ. ರಕ್ಷಿತಾ ಎಂ.ಬಿ 5ನೇ ತರಗತಿವರೆಗೆ ಐವರ್ನಾಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದು, ಬಳಿಕ ಕಾರ್ಕಳದ ಅತ್ತೂರು ಸೈಂಟ್ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದರು. ಪ್ರೌಢ ಶಿಕ್ಷಣವನ್ನು ನಿಟ್ಟೆ ಎನ್.ಎಸ್.ಎ.ಎಂ ಪಿಯು ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಪದವಿ ಶಿಕ್ಷಣವನ್ನು ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪೂರೈಸಿದರು. ಇದೀಗ ಮಿಲಿಟರಿಗೆ ಸೇರುವ ಎಲ್ಲಾ ಪರೀಕ್ಷೆಗಳನ್ನು ಪೂರೈಸಿದ ರಕ್ಷಿತಾ ಅಸ್ಸಾಂ ರೈಫಲ್ಸ್‌ ಗೆ ಆಯ್ಕೆಯಾಗಿದ್ದು, ಡಿ. 25 ರಂದು ನಾಗಾಲ್ಯಾಂಡ್‌ನ ಸುಖೋವಿಯಲ್ಲಿ ನಡೆಯಲಿರುವ ತರಬೇತಿಯಲ್ಲಿ ಭಾಗವಹಿಸಲು ಅಸ್ಸಾಂಗೆ ತೆರಳಲಿದ್ದಾರೆ.

Also Read  ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ ➤ ಕಡಬ ತಾಲೂಕಿನ ನಾಲ್ವರು ಶಿಕ್ಷಕರು ಆಯ್ಕೆ

error: Content is protected !!
Scroll to Top