ಹಾಲಿವುಡ್ ನಟ ಸ್ಟೀಫನ್ ಬಾಸ್ ಆತ್ಮಹತ್ಯೆ..?

(ನ್ಯೂಸ್ ಕಡಬ) newskadaba.com ಅಮೇರಿಕಾ, ಡಿ 15. ಹಾಲಿವುಡ್ ನ ಖ್ಯಾತ ನಟ, ಡ್ಯಾನ್ಸರ್, ಹಾಗೂ ಡಿಜೆ ಸ್ಟೀಫನ್ ಬಾಸ್ ಮೃತಪಟ್ಟಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ಡಿ. 13 ರಂದು ಅವರ ಮೃತದೇಹ ಹೋಟೇಲೊಂದರ ಕೋಣೆಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ಸ್ಟೀಫನ್ ಬಾಸ್ ಸೋಮವಾರ (ಡಿ. 12) ರಾತ್ರಿ ತಂಗಲು ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ್ದರು. ಈ ಹೋಟೆಲ್ ತಮ್ಮ ಪತ್ನಿ ಆಲಿಸನ್ ಹೋಲ್ಕರ್ ಮತ್ತು ಅವರ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಒಂದು ಮೈಲಿಗಿಂತಲೂ ಕಡಿಮೆ ಅಂತರದಲ್ಲಿತ್ತು. ಅವರ ಚೆಕ್-ಔಟ್ ಸಮಯ ಮೀರಿದ್ದರಿಂದ ಕೊಠಡಿಗೆ ಹೊಟೇಲ್ ಸಿಬ್ಬಂದಿಗಳು ವಿಚಾರಿಸಲು ಹೋದಾಗ ತಲೆಗೆ ಗುಂಡೇಟು ಹೊಡೆದುಕೊಂಡ ಸ್ಥಿತಿಯಲ್ಲಿ ಬಾತ್ ರೂಂ ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.

Also Read  ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್‌ ಇಂದು ಪ್ರಮಾಣವಚನ

error: Content is protected !!
Scroll to Top