ಗ್ರಾಮ ಒನ್ ಕೇಂದ್ರ – ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 15. ಜಿಲ್ಲೆಯಲ್ಲಿ ಒಟ್ಟು 223 ಗ್ರಾಮ ಪಂಚಾಯತಿಗಳಿಗೆ 304 ಗ್ರಾಮ ಒನ್ ಕೇಂದ್ರಗಳನ್ನು ತೆರೆಯಬೇಕಾಗಿದ್ದು, ಈ ಪೈಕಿ 230 ಕೇಂದ್ರಗಳನ್ನು ತೆರೆಯಲಾಗಿದೆ. ಬಾಕಿ ಇರುವ 74 ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಖಾಲಿ ಇರುವ ಗ್ರಾಮ ಪಂಚಾಯತ್‍ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಅರ್ಹತೆಗಳು:
ಫ್ರಾಂಚೈಸಿ ಅರ್ಜಿದಾರರು ಡಿಪ್ಲೋಮಾ, ಐ.ಟಿ.ಐ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಅಥವಾ ತಾಂತ್ರಿಕ ವಿಭಾಗದಲ್ಲಿ ಪರಿಣತಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅರ್ಜಿದಾರರು ಸ್ವಂತ ಅಥವಾ ಬಾಡಿಗೆ ಕಟ್ಟಡ ಹೊಂದಿರಬೇಕು ಅಥವಾ ಟೈಲ್ಸ್ ಗ್ರಾನೈಟ್ ಫ್ಲೋರಿಂಗ್, ಆರ್.ಸಿ.ಸಿ ಛಾವಣಿ ಇತ್ಯಾದಿ ಯಾವುದೇ ನೀರು ಸೋರಿಕೆಯಾಗದ ಕಟ್ಟಡಗಳಲ್ಲಿ ಗ್ರಾಮಒನ್ ಕೇಂದ್ರಗಳನ್ನು ಸ್ಥಾಪಿಸಲು ತಯಾರಾಗಿರಬೇಕು. ಆಧಾರ್ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು ಹಾಗೂ ಅದೇ ಗ್ರಾಮ ಪಂಚಾಯತ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅಂತೆಯೇ ಮಹಿಳೆಯರಿಗೆ, ವಿಕಲಚೇತನರಿಗೆ ಹಾಗೂ ತೃತೀಯ ಲಿಂಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆಸಕ್ತರು ವೆಬ್‍ಸೈಟ್ ವಿಳಾಸ: https://gramaonebis.com/applicantregistration ಮೂಲಕ ಆನ್‍ಲೈನ್ ನಲ್ಲಿ ಇದೇ ಡಿಸೆಂಬರ್ 24ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ:080-69008800 ಅನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮರ್ಕಂಜ: ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಮಳೆಯ ನಡುವೆ ಧರಣಿ ➤ ಅಂಬೇಡ್ಕರ್ ರಕ್ಷಣಾ ವೇದಿಕೆ ಬೆಂಬಲ

error: Content is protected !!
Scroll to Top