ದುಬೈ, ಕುವೈಟ್ ನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.15. ದುಬೈ ಮತ್ತು ಕುವೈಟ್ ದೇಶಗಳಲ್ಲಿ ಮನೆ ಕೆಲಸ ನಿರ್ವಹಿಸಲು ಒಟ್ಟು 800 ಜನ ಮಹಿಳಾ ಕೆಲಸಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು 30-45 ವಯೋಮಿತಿಯಲ್ಲಿರಬೇಕು. ಪಾಸ್ ಪೋರ್ಟ್ ಹೊಂದಿರಬೇಕು. ಟಿಕೆಟ್ ಮತ್ತು ವೀಸಾ ವೆಚ್ಚವನ್ನು ವಿದೇಶಿ ನಿಯೋಜಕರು ಭರಿಸಲಿದ್ದು,  ಎರಡು ವರ್ಷಗಳ ಸೇವಾವಧಿ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಉರ್ವ ಮಾರುಕಟ್ಟೆಯ ಕಟ್ಟಡದ ಎರಡನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಸಂಯೋಜಕರ ಮೊ.ಸಂ: 9110248485 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  "ನನಗೆ ಹುಡುಗ ಬೇಕು.. ಹುಡುಕಿ ಕೊಟ್ಟವರಿಗೆ 4 ಲಕ್ಷ ರೂ. ಬಹುಮಾನ"- ಬಂಪರ್ ಆಫರ್ ಘೋಷಿಸಿದ ಮಹಿಳೆ

error: Content is protected !!
Scroll to Top