ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್ ಪಲ್ಟಿ ➤ 5 ವಿದ್ಯಾರ್ಥಿಗಳು ಗಂಭೀರ

(ನ್ಯೂಸ್‌ ಕಡಬ) newskadaba.comಶಿವಮೊಗ್ಗ, ಡಿ. 15. ಪ್ರವಾಸಕ್ಕೆಂದು ಬಂದ ಶಾಲಾ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 5 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಸಾಗರ ತಾಲೂಕಿನ ಹಿನ್ನೀರಿನ ವಕ್ಕೊಡಿ ತಿರುವಿನಲ್ಲಿ ನಡೆದಿದೆ.

ಪ್ರವಾಸಕ್ಕೆಂದು ಹೈಸ್ಕೂಲ್ ಮಕ್ಕಳ ಶಾಲಾ ತಂಡವೊಂದು ಹಾಸನದಿಂದ ಶಿವಮೊಗ್ಗಕ್ಕೆ ಬಂದಿದ್ದು, ಏಕಾಏಕಿ ಶಾಲಾ ಬಸ್ ಪಲ್ಟಿಯಾದ ಪರಿಣಾಮ ಒಟ್ಟು 5 ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು,  ಅವರನ್ನು ಹತ್ತಿರದ ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!
Scroll to Top