ಚಲಿಸುತ್ತಿದ್ದಾಗಲೇ ಕಳಚಿದ ಕೆಎಸ್ಸಾರ್ಟಿಸಿ ಬಸ್ಸಿನ ನಾಲ್ಕು ಚಕ್ರಗಳು ► ಮುಂದೇನಾಯಿತೆಂಬ ಕುತೂಹಲವೇ…?

(ನ್ಯೂಸ್ ಕಡಬ) newskadaba.com ಮಡಿಕೇರಿ, ನ.23. ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದರ ಹಿಂಬದಿಯ ನಾಲ್ಕೂ ಚಕ್ರಗಳು ಒಟ್ಟಿಗೆ ಕಳಚಿದ ಘಟನೆ ಮಡಿಕೇರಿಯ ಕುಶಾಲನಗರದಲ್ಲಿ ನಡೆದಿದೆ.

ಮೈಸೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಡಿಕೇರಿಯ ಸೋಮವಾರ ಪೇಟೆ ತಾಲೂಕಿನ ಕುಶಾಲನಗರ ಸಮೀಪದ ಕೊಪ್ಪಳ ಎಂಬಲ್ಲಿ ತಲುಪಿದಾಗ ಹಿಂಬದಿಯ ಚಕ್ರಗಳು ಒಟ್ಟಾಗಿ ಚಾಸಿಸ್ ನಿಂದ ವಿಭಜನೆಗೊಂಡು ಹೊರಕ್ಕುರುಳಿದೆ.

ಬಸ್ಸಿನಲ್ಲಿ ಉಂಟಾದ ಈ ಅವಘಡವನ್ನು ಕಂಡು ಬಸ್ ನಲ್ಲಿದ್ದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ‌. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Also Read  ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

error: Content is protected !!
Scroll to Top