ಯಲ್ಲಾಪುರ: ಕಾರುಗಳ ಭೀಕರ ಅಪಘಾತ ➤ಯಕ್ಷಗಾನ ಕಲಾವಿದ ಮೃತ್ಯು

(ನ್ಯೂಸ್‌ ಕಡಬ) newskadaba.com ಯಲ್ಲಾಪುರ , ಡಿ.14 ಅತ್ಯಂತ ವೇಗವಾಗಿ ಬಂದ ಎರಡು ಕಾರುಗಳ ನಡುವೆ ಅಪಘಾತ ನಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ  ಡಿ. 13ರಂದು ನಡೆದಿದೆ.

ಈ ಘಟನೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ತಿಮ್ಮಪ್ಪ ಭಾಗ್ವತ್  ಬಾಳೆಹದ್ದ(65) ತೀವ್ರ ಗಾಯಗೊಂಡಿದ್ದರು ತಕ್ಷಣದಲ್ಲಿ ಅವರನ್ನು ಹತ್ತಿರದ ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಆವರಣ ಗೋಡೆ ಉದ್ಘಾಟನೆ, ಸಮ್ಮಾನ

error: Content is protected !!
Scroll to Top