ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ !!!    

(ನ್ಯೂಸ್ ಕಡಬ) newskadaba.com ದೆಹಲಿ, ಡಿ. 14. ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ ಘಟನೆ ರಾಷ್ಟ್ರ ರಾಜಧಾನಿ ದಿಲ್ಲಿಯ ದ್ವಾರಕಾ ಪ್ರದೇಶದಲ್ಲಿ ಸಂಭವಿಸಿದೆ.

17 ವರ್ಷದ ವಿದ್ಯಾರ್ಥಿನಿ ಮತ್ತು ಆಕೆಯ ತಂಗಿ ಶಾಲೆಗೆ ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ಎಸೆದು ಪರಾರಿಯಾಗಿದ್ದು, ನೋವಿನಿಂದ ನರಳಾಡಿದ ಬಾಲಕಿ ರಸ್ತೆಯಲ್ಲಿ ಅತ್ತಿತ್ತ ಓಡಲಾರಂಭಿಸಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎನ್ನಲಾಗಿದೆ. ಸಂತ್ರಸ್ಥೆಯ ತಂಗಿ ಘಟನೆಯನ್ನು ಹತ್ತಿರದಿಂದ ನೋಡಿದ್ದು, ನಾನು ಹಾಗೂ ನನ್ನ ಅಕ್ಕ ಶಾಲೆಗೆ ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದು ಆ್ಯಸಿಡ್ ಎರಚಿದ್ದಾರೆ. ನಾನು ಅಕ್ಕನ ಮುಖ ನೋಡಿ ಗಾಬರಿಗೊಂಡು ತಂದೆಗೆ ಕರೆ ಮಾಡಿದೆ. ಬೈಕ್ ನಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಅವರಿಬ್ಬರೂ ನಮಗೆ ಮೊದಲೇ ಗೊತ್ತಿದೆ. ನನ್ನ ತಂದೆಗೂ ಬೈಕ್ ನಲ್ಲಿದ್ದ ಇಬ್ಬರ ಗುರುತು ಪರಿಚಯವಿದೆ ಎಂದು ತಿಳಿಸಿದ್ದಾರೆ.

Also Read  ಹಳಿ ತಪ್ಪಿದ ಸಬರಮತಿ ಎಕ್ಸ್ ಪ್ರೆಸ್ ಪ್ಯಾಸೆಂಜರ್ ರೈಲಿನ 20 ಬೋಗಿಗಳು             ಪ್ರಯಾಣಿಕರ ಸ್ಥಳಾಂತರ                                                

 

error: Content is protected !!
Scroll to Top