ಅಂತ್ಯಕ್ರಿಯೆಗೆ ಹಣವಿಲ್ಲದೇ ತಾಯಿಯ ಮೃತದೇಹವನ್ನು ಮನೆಯಲ್ಲೇ ಬಚ್ಚಿಟ್ಟ ಮಗ..!

Death, deadbody, Waterfall

(ನ್ಯೂಸ್ ಕಡಬ) newskadaba.com ಗೋರಖ್‌ಪುರ, ಡಿ. 14. ಅಂತ್ಯಕ್ರಿಯೆಗೆ ಹಣವಿಲ್ಲದೇ ವ್ಯಕ್ತಿಯೋರ್ವ ತನ್ನ ತಾಯಿಯ ಮೃತದೇಹವನ್ನು ಮನೆಯಲ್ಲೇ ಬಚ್ಚಿಟ್ಟ ಘಟನೆ ಗುಲ್ರಿಹಾ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ನಿವೃತ್ತ ಸರಕಾರಿ ಶಿಕ್ಷಕಿ ಶಾಂತಿ ದೇವಿ (82) ಎಂದು ಗುರುತಿಸಲಾಗಿದೆ. ಇವರು ನಾಲ್ಕೈದು ದಿನಗಳ ಹಿಂದೆ ಮೃತಪಟ್ಟಿದ್ದು, ಅವರ ಪುತ್ರ ನಿಖಿಲ್ ಮಿಶ್ರಾ ಎಂಬಾತ ತಾಯಿಯ ಶವವನ್ನು ಅಂತ್ಯಕ್ರಿಯೆ ನಡೆಸದೆ ಮನೆಯಲ್ಲೇ ಬಚ್ಚಿಟ್ಟಿದ್ದ. ಈತ ಮದ್ಯವ್ಯಸನಿಯಾಗಿದ್ದು, ಮಾನಸಿಕವಾಗಿಯೂ ಸ್ಥಿರತೆ ಹೊಂದಿರಲಿಲ್ಲ. ಇವರ ಮನೆಯಿಂದ ತೀರಾ ದುರ್ವಾಸನೆ ಬರುತ್ತಿದ್ದ ಹಿನ್ನೆಲೆ ಆಸುಪಾಸಿನ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದಾಗ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿರುವುದು ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಮನೋಜ್ ಕುಮಾರ್ ಅವಸ್ತಿ ತಿಳಿಸಿದ್ದಾರೆ. ಇನ್ನು ನಿಖಿಲ್ ಮಿಶ್ರಾನನ್ನು ವಿಚಾರಣೆ ನಡೆಸಿದಾಗ ಐದು ದಿನಗಳ ಹಿಂದೆ ತಾಯಿ ಮೃತಪಟ್ಟಿದ್ದಾರೆ. ಹಣಕಾಸಿನ ಕೊರತೆಯಿಂದಾಗಿ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಿಲ್ಲ ಎಂದು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Also Read  ಹಾವು ಕಡಿತದಿಂದ ಮೃತಪಟ್ಟ ಅಣ್ಣನ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ತಮ್ಮನಿಗೂ ಹಾವು ಕಡಿತ- ಮೃತ್ಯು..!

error: Content is protected !!
Scroll to Top