ಗೂಳಿ ತಿವಿದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಹಾವೇರಿ, ಡಿ. 14. ಹೋರಿ ಬೆದರಿಸುವ ಹಬ್ಬದಲ್ಲಿ ಕೊಬ್ಬರಿ ಹೋರಿ ತಿವಿದು ಯುವಕನೋರ್ವ ಮೃತಪಟ್ಟು, 12ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಮಂಜುನಾಥ್ ಚಳ್ಳಕ್ಕ (27) ಎಂದು ಗುರುತಿಸಲಾಗಿದೆ. ಹೋರಿ ಬೆದರಿಸುವ ಹಬ್ಬ ನೋಡಲೆಂದು ಹೋಗಿದ್ದ ಈತನ ಹೊಟ್ಟೆಯ ಎಡಭಾಗಕ್ಕೆ ಹೋರಿಯೊಂದು ರಭಸವಾಗಿ ತಿವಿದಿದ್ದು, ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ 12 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಪತ್ನಿಯ ಶೀಲ ಶಂಕಿಸಿದ ಪತಿ ➤ ಬೇಸತ್ತ ಪತ್ನಿಯ ಅಣ್ಣ ಮಾಡಿದ್ದೇನು ಗೊತ್ತೇ..?

error: Content is protected !!
Scroll to Top