ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ವಿಧಿವಶ

(ನ್ಯೂಸ್ ಕಡಬ) newskadaba.com ಮೈಸೂರು, ನ.23. ಹಿರಿಯ ಪತ್ರಕರ್ತ ಹಾಗೂ ಆಂದೋಲನ ಪತ್ರಿಕೆ ಸಂಸ್ಥಾಪರಾದ ರಾಜಶೇಖರ ಕೋಟಿ ಅವರು ಗುರುವಾರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾಜಶೇಖರ ಕೋಟಿ ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರು ಕಳೆದ 42 ವರ್ಷಗಳಿಂದ ಸುದೀರ್ಘ ಕಾಲ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿದ್ದರು. ಗದಗ ಜಿಲ್ಲೆ ಹುಯಿಲಗೋಳ ಗ್ರಾಮದಲ್ಲಿ ಜನಿಸಿದ ರಾಜಶೇಖರ ಕೋಟಿ ಹಿರಿಯ ಪತ್ರಕರ್ತರಾದ ಡಾ. ಪಾಟೀಲ್ ಪುಟ್ಟಪ್ಪ ಗರಡಿಯಲ್ಲಿ ಪತ್ರಿಕೋದ್ಯಮ ಆರಂಭಿಸಿದ್ದರು. ನಂತರ ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಆಂದೋಲನ ದಿನಪತ್ರಿಕೆ ಆರಂಭಿಸಿ ದೊಡ್ಡ ಯಶಸ್ಸು ಕಂಡಿದ್ದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಟಿಎಸ್‍ಆರ್ ಪ್ರಶಸ್ತಿ, ಮುರುಘಾ ಶ್ರೀ ಪ್ರಶಸ್ತಿ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದರು. ಪತ್ನಿ ನಿರ್ಮಾಲ ಕೋಟಿ, ಮಕ್ಕಳಾದ ರಶ್ಮಿ ಕೋಟಿ, ರಮ್ಯಾ ಕೋಟಿ ಹಾಗೂ ರವಿಕೋಟಿಯನ್ನ ಅಗಲಿದ್ದಾರೆ . ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ಗಣ್ಯರು ಕೋಟಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ .

Also Read  ಮಂಗಳೂರಿನಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್..!!!

 

error: Content is protected !!
Scroll to Top