ಉಪ್ಪಿನಂಗಡಿ: ಗುಜಿರಿ ಹೆಕ್ಕುವ ನೆಪದಲ್ಲಿ ಕಳ್ಳತನ ➤ ಇಬ್ಬರು ಪೊಲೀಸ್ ವಶಕ್ಕೆ

crime, arrest, suspected

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 14. ಗುಜಿರಿ ಹೆಕ್ಕುವ ನೆಪದಲ್ಲಿ ಮನೆಯಂಗಳಕ್ಕೆ ಭೇಟಿ ನೀಡಿ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಮಂಗಳವರಾದಂದು ನಡೆದಿದೆ.

ಬಂಧಿತರನ್ನು ದಾವಣಗೆರೆಯ ಹರಪ್ಪನಹಳ್ಳಿ ತಾಲೂಕಿನ ಹರ್‌ಕರಣ್ ಹಳ್ಳಿ ನಿವಾಸಿ ಶಿವ ಯಾನೆ ಧರ್ಮ ನಾಯಕ್ (39) ಹಾಗೂ ಇನ್ನೊಬ್ಬ ಗದಗ ಜಿಲ್ಲೆಯ ಮುಂಡರಿಲ್ಲಾ ನಿವಾಸಿ ಪ್ರದೀಪ್ ಯಾನೆ ಚಟ್ರಪ್ಪ (27) ಎಂದು ತಿಳಿದು ಬಂದಿದೆ. ಇವರು ಮಂಗಳವಾರದಂದು ನಸುಕಿನ ವೇಳೆ ಸಂಗಮ್ ಸೌಂಡ್ಸ್ ಮಾಲಕರ ಮನೆಯಂಗಳಕ್ಕೆ ಬಂದು ಅಲ್ಲಿದ್ದ ಮೆಟಲ್ ಚೋಕ್ ಹಾಗೂ ನಾಯಿಯ ಸರಪಳಿಯನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ‌. ವಿಷಯ ಗಮನಕ್ಕೆ ಬಂದ ಕೂಡಲೇ ಸ್ಥಳೀಯ ಸಿಸಿ ಕ್ಯಾಮರಾವನ್ನು ವೀಕ್ಷಿಸಿದಾಗ ಕಳ್ಳರ ಗುರುತು ಪತ್ತೆಯಾಗಿದ್ದು, ಪೇಟೆಯಲ್ಲಿಯೇ ಇದ್ದ ಅವರಿಬ್ಬರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

Also Read  ಉಳ್ಳಾಲ: ಅಕ್ರಮ ಗೋಸಾಗಾಟ ➤ ತಡೆಹಿಡಿದ ಹಿಂದೂ ಸಂಘಟನೆ ಕಾರ್ಯಕರ್ತರು

error: Content is protected !!
Scroll to Top