ಬಂಟ್ವಾಳ: ಶೌಚಾಲಯದ ಗುಂಡಿ ಅಗೆಯುತ್ತಿದ್ದ ವೇಳೆ ಮಣ್ಣು ಕುಸಿತ ➤ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 14. ಶೌಚಾಲಯದ ಗುಂಡಿ ಅಗೆಯುತ್ತಿದ್ದ ವೇಳೆ ಮಣ್ಣು ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಅಡ್ಡೂರಿನಲ್ಲಿ ನಡೆದಿದೆ.

 


ಮೃತರನ್ನು ಅಡ್ಡೂರು ನಿವಾಸಿ ಆದಂ ಹಾಗೂ ಗಾಯಗೊಂಡವರನ್ನು ಇಮ್ತಿಯಾಝ್ ಮತ್ತು ಇಬ್ರಾಹೀಂ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು ನಾಲ್ಕು ಮಂದಿ ಶೌಚಾಲಯಕ್ಕೆ ಗುಂಡಿ ಅಗೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

Also Read  ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ರಚನಾ ಆತ್ಮಹತ್ಯೆ ಪ್ರಕರಣ ► ಅನುಮಾನ ವ್ಯಕ್ತಪಡಿಸಿದ ರಚನಾ ಪೋಷಕರು

error: Content is protected !!
Scroll to Top