ಪುತ್ತೂರು: ಬಾವಿಗೆ ಬಿದ್ದ ವೃದ್ದೆ- ರಕ್ಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 14. ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆಯೊಬ್ಬರನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದ ಘಟನೆ ಬಲ್ನಾಡಿನಲ್ಲಿ ಮಂಗಳವಾರದಂದು ನಡೆದಿದೆ.

 


ಬಾವಿಗೆ ಬಿದ್ದ ವೃದ್ದೆಯನ್ನು ಬಲ್ನಾಡು ನಿವಾಸಿ ಬಾಲಕ್ಕ ಎಂದು ಗುರುತಿಸಲಾಗಿದೆ. ಇವರು ಮಧ್ಯಾಹ್ನ ಊಟದ ಬಳಿಕ ನಾಪತ್ತೆಯಾಗಿದ್ದರು. ಮನೆ ಮಂದಿ ಹುಡುಕಾಡಿದಾಗ ಬಾವಿಯ ಹಗ್ಗ ಕೆಳಗೆ ಬಿದ್ದಿತ್ತು, ಇದನ್ನು ಗಮನಿಸಿ ಬಾವಿಗೆ ಇಣುಕಿದಾಗ ಬಾವಿಯೊಳಗೆ ಅವರು ಬಿದ್ದಿರುವುದು ತಿಳಿದುಬಂದಿದೆ. ತಕ್ಷಣವೇ ಮನೆಂಮದಿ ಅಗ್ನಿಶಾಮಕದಳದವರಿಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಠಾಣಾಧಿಕಾರಿ ವಿ.ಸುಂದರ್ ಅವರ ನೇತೃತ್ವ ತಂಡವು ಸುಮಾರು 30 ಅಡಿ ಆಳದ ಬಾವಿಯಿಂದ ಬಾಲಕ್ಕ ಅವರನ್ನು ಮೇಲೆತ್ತುವ ಮೂಲಕ ರಕ್ಷಣೆ ಮಾಡಿ, ಬಳಿಕ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.

Also Read  ಕಡಬ: ಕೊರೋನಾ ಸೋಂಕಿಗೆ ಮತ್ತೊಂದು ಬಲಿ ➤ 63 ವರ್ಷದ ಮಹಿಳೆ ಮೃತ್ಯು

 

error: Content is protected !!
Scroll to Top