ಅನ್ಯಕೋಮಿನ ವಿದ್ಯಾರ್ಥಿಗೆ ಪತ್ರ ಬರೆದ ಪ್ರಕರಣ ➤ ವಿದ್ಯಾರ್ಥಿಗಳು ಅಮಾನತು

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 13. ಖಾಸಗಿ ವಿದ್ಯಾಸಂಸ್ಥೆಯ ಹಿಂದೂ ವಿದ್ಯಾರ್ಥಿನಿಯೋರ್ವಳು ಮುಸ್ಲಿಂ ಯುವಕನಿಗೆ ಪತ್ರ ಬರೆದ ವಿಚಾರವಾಗಿ ಗೊಂದಲವುಂಟು ಮಾಡಿದ ಎರಡು ಕೋಮಿನ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ ಬಗ್ಗೆ ವರದಿಯಾಗಿದೆ.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕೇಪು ಮೂಲದ ಹಿಂದೂ ವಿದ್ಯಾರ್ಥಿನಿ ಹಾಗೂ ಕೆಲಿಂಜದ ಮುಸ್ಲಿಂ ವಿದ್ಯಾರ್ಥಿ ನಡುವೆ ಪ್ರೇಮಾಂಕುರವಾಗಿದ್ದು, ಈ ಹಿಂದೆಯೇ ಪ್ರಾಂಶುಪಾಲರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಇದರ ಮುಂದುವರಿದ ಭಾಗವಾಗಿ ಬ್ಯಾಗ್ ನಲ್ಲಿ ಲವ್ ಲೆಟರ್ ಪತ್ತೆಯಾಗಿದ್ದು, ಎರಡು ಕೋಮಿನ ವಿದ್ಯಾರ್ಥಿಗಳು ಗುಂಪು ಸೇರಿದ್ದ ಹಿನ್ನೆಲೆ, ಕೆಲವು ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಅಮಾನತು ಮಾಡಿದ್ದಾರೆ ಎನ್ನಲಾಗಿದೆ.

Also Read  ಮನೆ ಮಾಲೀಕನಿಗೆ ಖಾರದ ಪುಡಿ ಎರಚಿ, ಬೆದರಿಸಿ ನಗ-ನಗದು ದೋಚಿದ ಕಳ್ಳರು…!

error: Content is protected !!