ಹಿಂದೂ ಜಾಗರಣಾ ವೇದಿಕೆಯ ಕಡಬ ತಾಲೂಕು ಅಧ್ಯಕ್ಷರಾಗಿ ► ಉದ್ಯಮಿ ಹರೀಶ್ ಉಂಡಿಲ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.23. ಹಿಂದೂ ಜಾಗರಣ ವೇದಿಕೆಯ ಕಡಬ ತಾಲೂಕು ಅಧ್ಯಕ್ಷರಾಗಿ ಕಡಬದ ಉದ್ಯಮಿ ಹರೀಶ್ ಉಂಡಿಲ ಮತ್ತು ಕಾರ್ಯದರ್ಶಿಯಾಗಿ ಮಲ್ಲೇಶ್ ಆಲಂಕಾರು ಆಯ್ಕೆಯಾಗಿದ್ದಾರೆ.

ಆಲಂಕಾರು ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಈ ಆಯ್ಕೆ ನಡೆಯಿತು. ಸಂಚಾಲಕರಾಗಿ ವೆಂಕಟ್ರಮಣ ಕುತ್ಯಾಡಿ, ನಿಧಿ ಪ್ರಮುಖರಾಗಿ ಗೋವಿಂದ ರಾಜ್ ಭಟ್ ಮರ್ದಾಳ, ಸಹಸಂಚಾಲಕರಾಗಿ ಪ್ರಮೋದ್ ರೈ ಮರ್ದಾಳ, ಮೋಹನದಾಸ್ ಪುಂಜ ಕುಂತೂರು, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಪ್ರಶಾಂತ್ ಪಂಜೋಡಿ ಆಯ್ಕೆಯಾಗಿದ್ದಾರೆ. ಆಯ್ಕೆ ಸಂದರ್ಭದಲ್ಲಿ ಸಂಘಟನೆಯ ಮಂಗಳೂರು ವಿಭಾಗ ಸಹ ಸಂಚಾಲಕ ರವಿರಾಜ್ ಶೆಟ್ಟಿ, ನೂತನ ಪದಾಧಿಕಾರಿಗಳ ಜವಬ್ದಾರಿಗಳನ್ನು ಘೋಷಣೆ ಮಾಡಿದರು.

Also Read  ಜನವರಿ 3ರಿಂದ ಕರಾವಳಿ ಉತ್ಸವ- ಉಸ್ತುವಾರಿ ಸಚಿವ

ಹಿಂಜಾವೇ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಕೋಶಾಧಿಕಾರಿ ಸುಪ್ರಿತ್ ರೈ ಸವಣೂರು, ಪುತ್ತೂರು ತಾಲೂಕು ಸಂಚಾಲಕ ಚಿನ್ಮಯ ರೈ ಈಶ್ವರಮಂಗಲ, ಸಹಸಂಚಾಲಕ ದಿನೇಶ್ ಪುರುಷರಕಟ್ಟೆ ಮೊದಲಾದವರು ಇದ್ದರು.

error: Content is protected !!
Scroll to Top