(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 13. ಜಾನುವಾರುಗಳನ್ನು ಕಾಡುತ್ತಿರುವ ಚರ್ಮಗಂಟು ರೋಗ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ಹಸುಗಳು ರೋಗದಿಂದ ಬಳಲುತ್ತಿವೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಹಲವೆಡೆ ರೋಗ ಬಾಧಿಸಿದ್ದು, ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಕಾಸಿಂ ಎಂಬುವರ ಗಿರ್ ಹಸುಗಳು ಚರ್ಮಗಂಟು ರೋಗದಿಂದ ಬಳಲುತ್ತಿರುವುದು ಕಂಡುಬಂದಿದೆ. ಹೋರಿಯು ಕಳೆದ ಒಂದು ವಾರದಿಂದ ಮಲಗಲು ಆಗದೇ ಪರಿತಪಿಸುತ್ತಿದ್ದು, ಚರ್ಮಗಂಟು ರೋಗದಿಂದ ಅದರ ಸ್ನಾಯುಗಳು, ನರಗಳು ಮಲಗಲು ಕೂಡ ಸಹಕರಿಸುತ್ತಿಲ್ಲ. ಸದ್ಯ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಲಸಿಕೆ ಸಿಗದ ಕಾರಣ, ಖಾಸಗಿ ವೈದ್ಯರಲ್ಲಿ ತೋರಿಸಿದ್ದಾರೆ. ಇವರು ಇದಕ್ಕೆ ಆ್ಯಂಟಿ ಬಯೋಟಿಕ್ ಹಾಗೂ ನೋವು ಸಹಿಸುವ ಲಸಿಕೆ ನೀಡಿದ್ದಾರೆ ಎನ್ನಲಾಗಿದೆ.