ರಾಮಕುಂಜದ ಅನುಪ್ರಿಯಾ ಇಂಡೋ- ಟಿಬೆಟ್ ಗಡಿ ಪಡೆಗೆ ಆಯ್ಕೆ

(ನ್ಯೂಸ್ ಕಡಬ) newskadaba.com ರಾಮಕುಂಜ, ಡಿ. 13. ಸ್ಟಾಫ್ ಸೆಲೆಕ್ಷನ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ರಾಮಕುಂಜ ಗ್ರಾಮದ ಹಲ್ಯಾರ ನಿವಾಸಿ ಅನುಪ್ರಿಯಾ ಪಿ.ಜಿ. ಅವರು ಇಂಡೋ_ ಟಿಬೆಟಿಯನ್ ಗಡಿ ಪೊಲೀಸ್ ಪಡೆಡಗೆ ಆಯ್ಕೆಯಾಗಿದ್ದಾರೆ.

2021ರಲ್ಲಿ ನಡೆದ ಎಸ್ಎಸ್ ಸಿ ಪರಿಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ಅನುಪ್ರಿಯಾರವರು ಬೆಂಗಳೂರಿನ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಹಾಗೂ ಬಿಎಸ್ ಎಫ್ ನಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆಗೆ ಆಯ್ಕೆಯಾಗಿದ್ದು, ಇವರನ್ನು ಡಿ. 12ರಂದು ಹರಿಯಾಣದ ಐಟಿಬಿಪಿ ಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಲಾಗಿದೆ. ಇವರು ಪ್ರಾಥಮಿಕ ಶಿಕ್ಷಣವನ್ನು ಕುಣಿಗಲ್ ನ ಶ್ರೀದುರ್ಗಾ ವಿದ್ಯಾಕೇಂದ್ರದಲ್ಲಿ, ಕುಣಿಗಲ್ ನ ಸರಕಾರಿ ಕಾಲೇಜಿನಲ್ಲಿ ಪ್ರೌಢಶಿಕ್ಷಣ, ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ. ಕಾಲೇಜಿನಲ್ಲಿ ಪಿಯುಸಿ ಹಾಗೂ ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಬಿ.ಕಾಂ ವ್ಯಾಸಂಗ ಮಾಡಿದ್ದಾರೆ. ಇವರು ರಾಮಕುಂಜ ಗ್ರಾಮದ ಹಲ್ಯಾರ ನಿವಾಸಿ ಗಿರೀಶ್ ಪಿ ಹಾಗೂ ಜ್ಯೋತಿ ದಂಪತಿಯ ಪುತ್ರಿ.

Also Read  ಅರಂತೋಡು SKSBV ವತಿಯಿಂದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕ ಬಿಡುಗಡೆ

error: Content is protected !!
Scroll to Top