ಡ್ರಗ್ಸ್ ಮಾರಾಟ ➤ ನೈಜೀರಿಯಾದ ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.13  ಡ್ರಗ್ಸ್ ಸಾಗಣೆ ಮತ್ತು ಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಿರುವ ಪೊಲೀಸರು ನೈಜೀರಿಯಾದ ಮೂವರು ಪ್ರಜೆಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಬಂಧಿತರನ್ನು ನೈಜೀರಿಯಾದ ಕ್ನೇಚುವಾ ಡೇನಿಲ್, ಜೆರ್ರಿ ಎಂದು ಗುರುತಿಸಲಾಗಿದೆ. ಬಾಣಸವಾಡಿ ಹಾಗೂ ಡಿ,ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಎರಡೂ ಠಾಣೆಯ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿದಾಗ ಮೂವರು ಆರೋಪಿಗಳು ತಮ್ಮದೇ ದೇಶದ ಪೆಡ್ಲರ್ ಕಡೆಯಿಂದ ಡ್ರಗ್ಸ್ ಖರೀದಿಸಿ, ಪರಿಚಯಸ್ಥ ಗ್ರಾಹಕರಿಗೆ ಮಾರುತ್ತಿದ್ದರು. ಕೆಲ ಕಾಲೇಜಿನ ವಿದ್ಯಾರ್ಥಿಗಳು  ಹಾಗೂ ಕೆಲ ಖಾಸಗಿ ಕಂಪನಿ ಉದ್ಯೋಗಿಗಳು ಡ್ರಗ್ಸ್ ಖರೀದಿಸುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಎಂಡಿಎಂಎ ಹಾಗೂ ಎಕ್ಸ್ ಟೆಸಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

Also Read  ಅತಿಥಿ ಉಪನ್ಯಾಸಕರ ಆಯ್ಕೆ- ಆನ್ಲೈನ್ ಅರ್ಜಿ ಆಹ್ವಾನ

 

error: Content is protected !!
Scroll to Top