ಕುಮಾರಧಾರ ನದಿಗೆ ಸ್ನಾನಕ್ಕಿಳಿದ ವಿದ್ಯಾರ್ಥಿ ನೀರುಪಾಲು

(ನ್ಯೂಸ್ ಕಡಬ) newskadaba.com ಪುತ್ತೂರು, ನ.22. ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ಇಳಿದ ವಿದ್ಯಾರ್ಥಿಯೋರ್ವ ನೀರುಪಾಲಾದ ಘಟನೆ ಬುಧವಾರ ಸಂಜೆ ಪುತ್ತೂರಿನ ಅಂಬ್ರಿಗೇರಿ ಎಂಬಲ್ಲಿ ನಡೆದಿದೆ.

ನೀರುಪಾಲಾದ ವಿದ್ಯಾರ್ಥಿಯನ್ನು ನಗರದ ವಿವೇಕಾನಂದ ಕಾಲೇಜಿನ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಹೇಮಂತ್ ಎಂದು ಗುರುತಿಸಲಾಗಿದೆ.

ಹೇಮಂತ್ ತನ್ನ ಐವರು ಸಹಪಾಠಿಗಳೊಂದಿಗೆ ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಎಂಬಲ್ಲಿನ ಅಂಬ್ರಿಗೇರಿಯಲ್ಲಿ ಹರಿಯುತ್ತಿರುವ ಕುಮಾರಧಾರ
ನದಿಗೆ ಸ್ನಾನಕ್ಕೆಂದು ತೆರಳಿದ್ದು, ನೀರಿನಲ್ಲಿ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತೆರಳಿದ್ದು, ಶೋಧ ಕಾರ್ಯ ಮುಂದುವರಿಸಿದ್ದಾರೆ.

Also Read  ವಿಧಾನಸಭಾ ಕ್ಷೇತ್ರಗಳಿಗೆ ಲಗ್ಗೆ ಇಡಲು ಕಾಂಗ್ರೆಸ್‌ ಈ ಬಾರಿ ಯುವಕರನ್ನು ಕಣಕ್ಕಿಳಿಸಿದೆ.!

error: Content is protected !!
Scroll to Top