ತಂದೆಯನ್ನು ಕೊಂದು 30 ಪೀಸ್ ಮಾಡಿ ಕೊಳವೆ ಬಾವಿಗೆ ಹಾಕಿದ ಪಾಪಿ ಮಗ

(ನ್ಯೂಸ್‌ ಕಡಬ) newskadaba.com ಬಾಗಲಕೋಟೆ, ಡಿ. 13. ಪಾಪಿ ಮಗನೊಬ್ಬ ತನ್ನ ತಂದೆಯನ್ನು ಕೊಡಲಿಯಿಂದ ಕೊಂದು ದೇಹವನ್ನು 30 ತುಂಡುಗಳನ್ನು ಮಾಡಿ ಬೋರ್‌ವೆಲ್‌ಗೆ ಎಸೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕೊಲೆಯಾದವರನ್ನು ಪರಶುರಾಮ್ ಕುಳಲಿ (54) ಎಂದು ಗುರುತಿಸಲಾಗಿದೆ. ಆರೋಪಿ ಮಗ ವಿಠ್ಠಲ್ ಕುಳಲಿ (20) ಎಂದು ಗುರುತಿಸಲಾಗಿದೆ. ತಂದೆ ಪ್ರತಿದಿನ ಕುಡಿದು ಹೆಂಡತಿ ಮತ್ತು ಮಗನಿಗೆ ಅವಾಚ್ಯ ಪದ ಬಳಸಿ ನಿಂದಿಸುತ್ತಿದ್ದನು ಎಂಬ ಕಾರಣಕ್ಕೆ ಮಗ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

Also Read  ಹುಚ್ಚು ನಾಯಿ ದಾಳಿ    ➤ ಹಲವರಿಗೆ ಗಾಯ

 

error: Content is protected !!
Scroll to Top