ವೃದ್ದನೋರ್ವನನ್ನು ವಿಚಾರಣೆ ನೆಪದಲ್ಲಿ ವಿನಾಕಾರಣ ಅಲೆದಾಡಿಸಿದ ಪೊಲೀಸ್ ಸಿಬ್ಬಂದಿಗಳು ➤ಪೊಲೀಸರ ವರ್ತನೆಯಿಂದ ಬೇಸರ ವ್ಯಕ್ತಪಡಿಸಿದ ವೃದ್ದ 

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.13 ‘ಬಂದೂಕು ಕಳ್ಳತನವಾಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ’ ಎಂಬುದಾಗಿ ದೂರು ನೀಡಲು ಹೋಗಿದ್ದ ವೃದ್ಧನನ್ನು ಹಲವು ಕಾರಣ ನೀಡಿ ಅಲೆದಾಡಿಸಿದ್ದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಬಿಇಎಲ್ ನಿವೃತ್ತ ಯೋಜನಾ ಅಧಿಕಾರಿ ಭೈರೇಗೌಡ(72) ಅವರು ಜಕ್ಕೂರಿನಲ್ಲಿ ನೆಲೆಸಿದ್ದು, 30 ವರ್ಷಗಳ ಹಿಂದೆ ಖರೀದಿಸಿದ್ದ ಬಂದೂಕಿಗೆ ಪೊಲೀಸರಿಂದಲೂ  ಪರವಾನಗಿ ಪಡೆದಿದ್ದರು ಎಂದು ತಿಳಿದುಬಂದಿದೆ.

ಬಂದೂಕು ಕಳ್ಳತನದ ಬಗ್ಗೆ ದೂರು ನೀಡಲು ಅಮೃತಹಳ್ಳಿ ಹೋಗಿದ್ದು ಎಲ್ಲಾ ದಾಖಲೆ ಸಮೇತ ದೂರು ನೀಡಿದರೂ ವಿಚಾರಣೆ ನೆಪದಲ್ಲಿ ವಿನಾಕಾರಣ ಅನುಮಾನ ವ್ಯಕ್ತಪಡಿಸಿದ್ದೇ ಅಲ್ಲದೆ ವಿದ್ಯುತ್ ಇಲ್ಲವೆಂದು ಸುಖಾಸುಮ್ಮನೆ ಅಲೆದಾಡಿಸಿದರು. ವೃದ್ದನಾದ ನನಗೆ ಪೊಲೀಸರ ವರ್ತನೆಯಿಂದ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Also Read  ಕಾರು ಅಪಘಾತ ➤ ಎಂಟು ಮಂದಿ ಮೃತ್ಯು.!

 

error: Content is protected !!
Scroll to Top