(ನ್ಯೂಸ್ ಕಡಬ) newskadaba.com ಮಾಣಿ, ನ.22. ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ ವತಿಯಿಂದ ಪ್ರತಿಭೋತ್ಸವ ಹಾಗೂ ಮರ್ಕಝ್ ರೂಬಿ ಜುಬಿಲಿ ಪ್ರಚಾರ ಸಮ್ಮೇಳನವು ಡಿಸೆಂಬರ್ 3 ಆದಿತ್ಯವಾರ ಮಿತ್ತೂರು ಸಮೀಪದ ಪಾಟ್ರಕೋಡಿ ಎಂಬಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿರುವ ಕಾರ್ಯಕ್ರಮ ಸಂಜೆ 6 ಗಂಟೆಗೆ ಸಮಾರೋಪಗೊಳ್ಳಲಿದ್ದು, ಆಕರ್ಷಕ ರ್ಯಾಲಿಯೊಂದಿಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಹಂಝ ಹಾದಿ ತಂಙಳ್ ಪಾಟ್ರಕೋಡಿ ಧ್ವಜಾರೋಹಣಗೈಯ್ಯಲಿದ್ದಾರೆ. ಉದ್ಘಾಟನೆಯನ್ನು ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ದಾರುಲ್ ಇರ್ಶಾದ್ ಶಿಲ್ಪಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ನೆರವೇರಿಸಲಿದ್ದು, ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೊಟ್ಟು ಪ್ರೊಫೆಸರ್ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಪ್ರಾಸ್ತಾವಿಕ ಭಾಷಣ ಮಾಡಲಿರುವರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ವಹಿಸಲಿದ್ದು, ಪ್ರಾಸ್ತಾವಿಕ ಭಾಷಣವನ್ನು ಸುಲೈಮಾನ್ ಸಅದಿ ಪಾಟ್ರಕೋಡಿ, ಮುಖ್ಯ ಪ್ರಭಾಷಣವನ್ನು ಸಿರಾಜುದ್ದೀನ್ ಸಖಾಫಿ ಕನ್ಯಾನ ಮಾಡಲಿದ್ದಾರೆ. ಇನ್ನಿತರ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸಲಿರುವ ಈ ಕಾರ್ಯಕ್ರಮಕ್ಕೆ ಮಾಣಿ ಸೆಕ್ಟರಿನ ಹನ್ನೊಂದು ಶಾಖೆಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.