ಹವಾಮಾನ ವೈಪರೀತ್ಯದಿಂದ ರಾಜ್ಯಕ್ಕೆ ವೈರಾಣು ಜ್ವರದ ಭೀತಿ

(ನ್ಯೂಸ್ ಕಡಬ) newskadaba.com ಬೆಂಗಳೂರು ,ಡಿ .12: ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದ ವೈರಲ್ ಜ್ವರ , ಡೆಂಗ್ಯೂ , ಚಿಕುನ್ ಗುನ್ಯಾ , ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿದೆ .ಒಂದೇ ತಿಂಗಳಲ್ಲಿ 930 ಡೆಂಗ್ಯೂ , 171 ಚಿಕುನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದೆ. ಇದು ಅತಂಕಕ್ಕೆ ಕಾರಣವಾಗಿದೆ.

ಈ ನಡುವೆ ಎರಡು ದಿನಗಳಿಂದ ಸುರಿಯುತ್ತಿರುವ  ಮಳೆಗೆ ಸಾಕಷ್ಟು ಭೀತಿ ಸೃಷ್ಟಿಸಿದೆ. ಚಳಿ ಹಾಗೂ ಮಳೆಯ ವಾತಾವರಣದಿಂದ ಕರ್ನಾಟಕದ ಬಹುತೇಕ ಜಿಲ್ಲೆಯ ಜನರು ಈ ವೈರಲ್ ಜ್ವರಕ್ಕೆ  ತತ್ತರಿಸಿದ್ದಾರೆ. ಜ್ವರದ ಜತೆಗೆ ಅತಿಯಾದ ಕೆಮ್ಮು, ಶೀತ , ಗಂಟಲುನೋವು , ತಲೆನೋವು , ಮೈ-ಕೈ ನೋವು ಮುಂತಾದ ಅನಾರೋಗ್ಯದ ಲಕ್ಷಣಗಳು ಹೆಚ್ಚಾಗುತ್ತಿದೆ.  ಇದರಿಂದಾಗಿ ಆರೋಗ್ಯ ಇಲಾಖೆಯು ಸೂಕ್ತ ಮು್ನ್ನೆಚ್ಚರಿಕೆ  ವಹಿಸುವಂತೆ ತಿಳಿಸಿದೆ.

error: Content is protected !!

Join the Group

Join WhatsApp Group