(ನ್ಯೂಸ್ ಕಡಬ) newskadaba.com ಕಡಬ, ನ.22. ಉಡುಪಿಯಲ್ಲಿ ನವಂಬರ್ 24 ರಿಂದ 26 ರವರೆಗೆ ನಡೆಯಲಿರುವ ಹಿಂದೂ ಧರ್ಮ ಸಂಸತ್ ಅಧಿವೇಶನ ಮತ್ತು ಹಿಂದೂ ಸಮಜೋತ್ಸವದ ಆಮಂತ್ರಣ ಪತ್ರಿಕೆ ಹಾಗೂ ವಾಹನ, ಅಂಗಡಿಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ ಕಡಬ ಪೇಟೆಯಲ್ಲಿ ನಡೆಯಿತು.
ಹಿಂಜಾವೇ ಮಂಗಳೂರು ವಿಭಾಗ ಸಹ ಸಂಚಾಲಕ ರವಿರಾಜ್ ಶೆಟ್ಟಿ, ಕಡಬ ಸರಸ್ವತಿ ವಿದ್ಯಾಲಯ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ಕಡಬ ಸಿ ಎ ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಹಿಂದೂ ಪರ ಸಂಘಟನೆಯ ಮುಖಂಡರಾದ ವಿಘ್ನೇಶ್ ಕೊಠಾರಿ, ಪ್ರಮೋದ್ ರೈ ನಂದುಗುರಿ, ರಘುರಾಮ್ ನಾೖಕ್ ಕುಕ್ಕರೆಬೆಟ್ಟು, ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಡಬ ಭಾಗದಿಂದ ಧಾರ್ಮಿಕ ಮುಖಂಡರು, ದೇವಾಲಯದ ಪ್ರಮುಖರು, ಭಜನಾ ಮಂದಿರಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸುವ ನಿಟ್ಟಿನಲ್ಲಿ ಕಡಬ ಸರಸ್ವತಿ ವಿದ್ಯಾಲಯದಲ್ಲಿ ಸಮಲೋಚನ ಸಭೆ ನಡೆಯಿತು. ವಿವಿಧ ದೇವಾಲಯ , ಭಜನಾ ಮಂದಿರ ಆಡಳಿತ ಸಮಿತಿಗಳ ಮುಖಂಡರಾದ ಜನಾರ್ದನ ಗೌಡ ಪಣೆಮಜಲು, ಶಿವರಾಮ ಶೆಟ್ಟಿ ಕೇಪು, ಅಲಿಯೂರು ವಿಶ್ವೇಶರ ಭಟ್, ಆಶೋಕ್ ಹೆಗ್ಡೆ ನಡುಮಜಲು, ಗಂಗಾಧರ ನಾೖಕ್, ತೀರ್ಥೇಶ್ ಪಡೆಜ್ಜಾರು, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಸೀತರಾಮ ಗೌಡ ಪೊಸವಳಿಕೆ, ಎ ಬಿ ಮನೋಹರ ರೈ, ಜನಾರ್ದನ ರಾವ್ ಅಡೂರು, ಸಂತೋಷ್ ಸುವರ್ಣ ಕೋಡಿಬೈಲು, ಪುಲಸ್ತ್ಯಾ ರೈ, ಸತೀಶ್ ಪುಜಾರಿ ಐತ್ತೂರು, ಪ್ರಮೋದ್ ರೈ ನಂದುಗುರಿ, ಪ್ರಕಾಶ್ ಎನ್ ಕೆ, ಮೋಹನ ಕೊೖಲ, ಹರೀಶ್ ಉಂಡಿಲ ಮೊದಲಾದವರು ಇದ್ದರು.
ಮಂಕುಡೆ ವೆಂಕಟ್ರಮಣ ರಾವ್ ಹಾಗೂ ಸುಬ್ರಾಯ ಪುಣಚ ಸಭೆ ನಡೆಸಿಕೊಟ್ಟರು. 26 ರಂದು ನಡೆಯುವ ವಿರಾಟ್ ಹಿಂದೂ ಸಮಜೋತ್ಸವಕ್ಕೆ ಕಡಬದಿಂದ ತೆರಳುವವರು ಕಡಬ ಶ್ರೀ ದುರ್ಗಾಂಬಿಕಾ ದೇವಳದ ವಠಾರದಲ್ಲಿ ಬೆಳಿಗ್ಗೆ 9.30ಕ್ಕೆ ಒಟ್ಟು ಸೇರಿ ಹೊರಡುವುದಾಗಿ ತೀರ್ಮಾನಿಸಲಾಯಿತು.