ಚೀನಾ ಶಾಲೆಯಲ್ಲಿ ಮತ್ತೆ ಕೋವಿಡ್ ಹೆಚ್ಚಳ

(ನ್ಯೂಸ್ ಕಡಬ) newskadaba.com  ಬೀಜಿಂಗ್, ಡಿ. 10. ಕೋವಿಡ್ ಸಾಂಕ್ರಾಮಿಕತೆ ನಿಯಂತ್ರಣಕ್ಕೆ ಹೇರಲಾಗಿದ್ದ ಕಠಿಣ ನಿಯಮಗಳನ್ನು ಸಡಿಗೊಳಿಸಿದ ಹಿನ್ನೆಲೆ ಚೀನಾದ ಶಾಲೆಗಳು ಮತ್ತು ವಾಣಿಜ್ಯಕೇಂದ್ರಗಳಲ್ಲಿ ಮತ್ತೆ ಸೋಂಕಿನ ಪ್ರಕರಣ ಹೆಚ್ಚಳವಾಗುತ್ತಿದೆ ಎಂದು ವರದಿ ತಿಳಿಸಿದೆ.

 

 

ಕುಸಿತ ಕಂಡ ಆರ್ಥಿಕತೆಯ ಪುನಶ್ಚೇತನದ ಉದ್ದೇಶದಿಂದ ಕೆಲವು ದಿನಗಳ ಹಿಂದೆ ಶೂನ್ಯ ಕೋವಿಡ್ ನೀತಿಯನ್ನು ಸಡಿಲಗೊಳಿಸಲು ಆರಂಭ ಮಾಡಿದ್ದರಿಂದ ಸಾಂಕ್ರಾಮಿಕತೆಯ ಪರಿಣಾಮವನ್ನು ಎದುರಿಸಲು ಚೀನಿ ಅಧಿಕಾರಿಗಳು ಪರದಾಡುತ್ತಿದ್ದಾರೆ. ಶೂನ್ಯ ಕೋವಿಡ್ ನೀತಿಯಿಂದಾಗಿ ಲಕ್ಷಾಂತರ ಜನರು ಮನೆಯೊಳಗೇ ಇರಬೇಕಾಗಿ ಬಂದಿದ್ದು, ಹತಾಶೆಗೂಂಡು ಸರ್ಕಾರದ ವಿರುದ್ದ ಪ್ರತಿಭಟನೆಗೆ ಇಳಿದಿದ್ದರು.

Also Read  ಭಾರತೀಯ ಮೂಲದ ಖ್ಯಾತ ವೈದ್ಯನ ಗುಂಡಿಕ್ಕಿ ಹತ್ಯೆ..!

 

error: Content is protected !!
Scroll to Top