ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮುಳುವಾಗಲಿದೆಯೇ ಸರಕಾರದ‌ ನೂತನ ಕಾನೂನು…? ► ಮಂತ್ರಿಗಳ, ಸರ್ಕಾರಿ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವುದು ಕಡ್ಡಾಯ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.22. ಬೀದಿ ಬೀದಿಗಳಲ್ಲಿ ಖಾಸಗಿ ಶಾಲೆಗಳು ತಲೆಯೆತ್ತುತ್ತಿದ್ದು, ಇವುಗಳ ಅಭಿವೃದ್ಧಿಯ ಮುಂದೆ ಸರಕಾರಿ ಶಾಲೆಗಳು ಇಂದೋ ನಾಳೆಯೋ ಬಾಗಿಲು ಮುಚ್ಚುವ ಭೀತಿಯಲ್ಲಿ ಕಾರ್ಯಾಚರಿಸುತ್ತಿದೆ.

ಒಂದೆಡೆ ಸರಕಾರಿ ಶಾಲೆಯಲ್ಲಿನ ಸೌಲಭ್ಯಗಳ ಕೊರತೆ, ಇನ್ನೊಂದೆಡೆ ಖಾಸಗಿ ಶಾಲೆಗಳ ದೌಲತ್ತಿನ ನಡುವೆ ಇದೀಗ ಚಳಿಗಾಲದ ಅಧಿವೇಶನದಲ್ಲಿ ಹೊಸದೊಂದು ಮಸೂದೆಯು ಮಂಡನೆಯಾಗುವ ಸಾಧ್ಯತೆಯಿದೆ.

ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವುಳ್ಳ ಶಿಕ್ಷಣವನ್ನು ಪಡೆಯುತ್ತಿದ್ದರೆ, ಇನ್ನೊಂದೆಡೆ ಬಡಮಕ್ಕಳು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅಧಿಕಾರಿಗಳ ಮಕ್ಕಳು ಕಲಿಯುವ ಶಾಲೆಗಳು ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದ್ದು, ಸರಕಾರಿ ಶಾಲೆಗಳು ಅಭಿವೃದ್ಧಿ ವಿಚಾರದಲ್ಲಿ ನನೆಗುದಿಗೆ ಬಿದ್ದಿವೆ. ಇದೀಗ ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ (ಜನಪ್ರತಿನಿಧಿಗಳು) ಮಕ್ಕಳು ಕಡ್ಡಾಯವಾಗಿ ಸರಕಾರಿ ಶಾಲೆಗೆ ದಾಖಲಾಗಬೇಕು ಎಂಬ ಹೊಸ ಮಸೂದೆಯನ್ನು ಮಂಡಿಸುವ ಮೂಲಕ ರಾಜ್ಯ ಸರಕಾರವು ಸರಕಾರಿ ಶಾಲೆಗಳ ಅಭಿವೃದ್ಧಿಯ ಕಡೆಗೆ ಗಮನ ಹರಿಸಲು‌ ಮುಂದಾಗಿದೆ.

Also Read  ಮಂಗಳೂರು : ವೆನ್ಲ್ಯಾಕ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೋವಿಡ್ ಸೋಂಕಿತ ಪತ್ತೆ

ಈ ಕುರಿತಾದಂತೆ ಹಲವು ವರ್ಷಗಳಿಂದಲೇ ಬೇಡಿಕೆಯಿದ್ದು, ಸಿದ್ದರಾಮಯ್ಯ ಸರಕಾರವು ಇದನ್ನು ಜಾರಿಗೆ ತರುವ ಸಂಭವವಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್‍ನ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಈ ವಿಧೇಯಕವನ್ನು ವಿಧಾನ ಪರಿಷತ್‍ನಲ್ಲಿ ಮಂಡಿಸುವ ಸಂಬಂಧ ಸಭಾಪತಿ ಡಿ.ಹೆಚ್. ಶಂಕರಮೂರ್ತಿಯವರ ಒಪ್ಪಿಗೆ ಪಡೆದಿದ್ದಾರೆ. ಇಂದು ಅಥವಾ ನಾಳೆ (ಗುರುವಾರ) ವಿಧಾನ ಪರಿಷತ್‍ನಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

error: Content is protected !!
Scroll to Top