2 ಸೆಂ.ಮೀ ಅಗಲದ ಬಾಟಲ್ ಕ್ಯಾಪ್ ನುಂಗಿದ ಮಗು..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಡಿ. 09. ಮನೆಯಲ್ಲಿ ಆಟವಾಡುತ್ತಿದ್ದ 8 ತಿಂಗಳ ಮಗುವೊಂದು ಅಕಸ್ಮಿಕವಾಗಿ ಬಾಟಲ್‌ನ ರಬ್ಬರ್ ಮುಚ್ಚಳ ನುಂಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 

ಮಗು ಆಟವಾಡುತ್ತಿದ್ದ ವೇಳೆ ಬಾಟಲ್‌ನ ರಬ್ಬರ್ ಮುಚ್ಚಳ ನುಂಗಿದ್ದು, ಈ ವಿಷಯ ಪೋಷಕರಿಗೂ ತಿಳಿದಿರಲಿಲ್ಲ. ಆದರೆ, ಒಂದು ವಾರದ ಬಳಿಕ ಮಗುವಿನ ಗಂಟಲಿನಲ್ಲಿ ಶಿಳ್ಳೆಯ ರೀತಿಯಲ್ಲಿ ಸೌಂಡ್ ಕೇಳಿ ಬಂದಿದ್ದರಿಂದ ಗಾಬರಿಗೊಂಡ ಪೋಷಕರು ಹತ್ತಿರದ ಅಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಮಗುವಿನ ಗಂಟಲಿನಲ್ಲಿ 2 ಸೆಂ.ಮೀ ಅಗಲದ ಮುಚ್ಚಳ ಇರುವುದನ್ನು ಗಮನಿಸಿ ಕೂಡಲೇ  ಮುಚ್ಚಳವನ್ನು ತೆಗೆದು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಕಾರು ಢಿಕ್ಕಿ ಹೊಡೆದು ಮೂರುವರೆ ವರ್ಷದ ಮಗು ಮೃತಪಟ್ಟ ಪ್ರಕರಣ   ➤  ಆರೋಪಿ ಅರೆಸ್ಟ್..!

 

error: Content is protected !!
Scroll to Top