ಯುವ ವಕೀಲರ ಮೇಲೆ ದೌರ್ಜನ್ಯ ಆರೋಪ ➤ ಬಂಟ್ವಾಳ ಎಸ್ಐ ಸುತೇಶ್ ಎಸ್ಪಿ ಕಛೇರಿಗೆ ವರ್ಗಾವಣೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 09. ಪೂಂಜಾಲಕಟ್ಟೆ ಎಸ್. ಐ.ಸುತೇಶ್ ಅವರನ್ನು ಕರ್ತವ್ಯ ಲೋಪದ ಕಾರಣ ನೀಡಿ ವರ್ಗಾವಣೆಗೊಳಿಸಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಸರಕಾರ ಆದೇಶ ಹೊರಡಿಸಿದೆ. ಸದ್ಯ ಮಂಗಳೂರು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

 

ಇತ್ತೀಚಿಗೆ ಯುವ ವಕೀಲನ ಬಂಧನ ವಿಚಾರದಲ್ಲಿ ಎಸ್.ಐ.ಸುತೇಶ್ ಅವರು ವಿವಾದಕ್ಕೆ ಸಿಲುಕಿದ್ದು, ಈ ಬಗ್ಗೆ ವಕೀಲರ ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪ್ರಸ್ತುತ ಉಪ್ಪಿನಂಗಡಿ ಎಸ್‌ಐ ನಂದಕುಮಾರ್‌ ಅವರಿಗೆ ಪುಂಜಾಲಕಟ್ಟೆ ಠಾಣೆಯ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!
Scroll to Top