(ನ್ಯೂಸ್ ಕಡಬ) newskadaba.com ಉಡುಪಿ ಡಿ.08. ಎಪಿಎಲ್ ಕಾರ್ಡುದಾರರಿಗೆ ಪಡಿತರ ವಿತರಣೆಯಲ್ಲಿ ನಿರ್ದಿಷ್ಟ ದರ ಪಡೆದು ನೀಡಲಾಗುತ್ತಿದ್ದ ಅಕ್ಕಿಯು ಕಳೆದ ಎರಡು ಮೂರು ತಿಂಗಳಿನಿಂದ ವಿತರಣೆಯಾಗುತ್ತಿಲ್ಲ. ಏಕವ್ಯಕ್ತಿ ಬಿಪಿಎಲ್ ಕಾರ್ಡ್ ಗೆ ತಿಂಗಳಿಗೆ 5 ಕೆ.ಜಿ. ಹಾಗೂ ಎರಡು ಅಥವಾ ಹೆಚ್ಚು ಸದಸ್ಯರಿಗೆ 10 ಕೆ.ಜಿ ಅಕ್ಕಿಯನ್ನು 15ರೂ ಗಳಂತೆ ನೀಡಲಾಗುತ್ತಿದ್ದ ಅಕ್ಕಿಯು ಸೆಪ್ಟೆಂಬರ್ ನಿಂದ ವಿತರಣೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ. ಉಡುಪಿ ಹಾಗೂ ದ.ಕ. ದಲ್ಲಿ ಶೇ.40 ರಿಂದ ಶೇ.60ರಷ್ಟು ಕಾರ್ಡ್ ದಾರರು ತಿಂಗಳ ರೇಷನ್ ಪಡೆಯುತ್ತಿದ್ದು, ಇದೀಗ ಇಲಾಖೆಯ ಸಮಸ್ಯೆಯಿಂದಾಗಿ ಅವರಿಗೀಗ ಅಕ್ಕಿ ಸಿಗದಂತಾಗಿದೆ.
ಎಪಿಎಲ್ ಕಾರ್ಡ್ ದಾರರಿಗೆ ನಿರ್ದಿಷ್ಟ ದರದಲ್ಲಿ ಸಿಗುತ್ತಿದ್ದ ಅಕ್ಕಿ ವಿಳಂಬ
