ಕ್ರೀಂ ಪಾರ್ಲರ್ ನಲ್ಲಿ ನಡೆಯಿತು ಪ್ರೇಮಿಗಳ ಲವ್ವಿಡವ್ವಿ ► ವೈರಲಾಯ್ತು ಮಂಗಳೂರು ಜೋಡಿಯ ಕಿಸ್ಸಿಂಗ್ ಸೀನ್

(ನ್ಯೂಸ್ ಕಡಬ) newskadaba.com ಮಂಗಳೂರು, ನ.21. ನಗರದ ಕ್ರೀಂ ಪಾರ್ಲರ್ ಒಂದರಲ್ಲಿ ಯುವಕನೊಬ್ಬ ಕಾಲೇಜು ಯುವತಿಗೆ ಮುತ್ತಿಟ್ಟ ದೃಶ್ಯದ ವಿಡಿಯೋವೊಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಬ್ಬರು ಕೆಫೆಯಲ್ಲಿ ಏನೋ ಮಾತನಾಡುತ್ತಾ ಕೂತಿದ್ದು, ಯುವಕ ಯುವತಿಯನ್ನು ಹತ್ತಿರಕ್ಕೆಳೆದುಕೊಂಡು ಮುತ್ತಿಡುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಮೇಲ್ನೋಟಕ್ಕೆ ಇವರಿಬ್ಬರು ಪ್ರೇಮಿಗಳಂತೆ ಕಂಡುಬರುತ್ತಿದ್ದು, ಯುವತಿ ಕಾಲೇಜಿನ ಸಮವಸ್ತ್ರ ಧರಿಸಿದ್ದು, ಯಾವ ಕಾಲೇಜಿನ ವಿದ್ಯಾರ್ಥಿನಿ ಎನ್ನುವುದು ಬಹಿರಂಗವಾಗಿಲ್ಲ.

ವೀಡಿಯೋದಲ್ಲಿ ವಿದ್ಯಾರ್ಥಿನಿಯ ಮುಖಚಹರೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಮಂಗಳೂರಿನ ಯಾವುದೋ ಕ್ರೀಂ ಪಾರ್ಲರ್ ನಲ್ಲಿ ನಡೆದಿದೆಯೆನ್ನಲಾದ ತಲೆಬರಹದಲ್ಲಿ ಇದೀಗ ಈ ವಿಡಿಯೋ ವೈರಲ್ ಆಗಿದೆ. ಈ ಜೋಡಿಯನ್ನು ಅರಿತಿರುವ ಯಾರೋ ಕಿಡಿಗೇಡಿಗಳು ಮಾನಹಾನಿ ಮಾಡುವ ಸಲುವಾಗಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿರುವ ಸಾಧ್ಯತೆಯಿದೆ.

Also Read  ಶಂಕಿತ ಉಗ್ರರಿಂದ ರಾಕೆಟ್ ದಾಳಿ 2 ಕಟ್ಟಡಗಳಿಗೆ ಹಾನಿ

error: Content is protected !!
Scroll to Top