(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 06. ಮಂಗಳೂರು ಜಂಕ್ಷನ್ ಹಾಗೂ ಮುಂಬೈನ ಲೋಕಮಾನ್ಯ ತಿಲಕ್ ನಿಲ್ದಾಣದ ಮಧ್ಯೆ ನಂ. 01453 ಸಾಪ್ತಾಹಿಕ ವಿಶೇಷ ರೈಲು ಸಂಚರಿಸಲಿದೆ.
ಈ ರೈಲು ಮುಂಬೈಯಿಂದ ಡಿ. 9, 16, 23, 30 ಹಾಗೂ ಜನವರಿ 6 (ಶುಕ್ರವಾರ) ರಾತ್ರಿ 10.15ಕ್ಕೆ ಹೊರಟು, ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್ ತಲಪಲಿದೆ. ನಂ. 01454 ಮಂಗಳೂರು ಜಂಕ್ಷನ್ ಲೋಕಮಾನ್ಯ ತಿಲಕ್ ಮುಂಬಯಿ ಸಾಪ್ತಾಹಿಕ ರೈಲು ಮಂಗಳೂರು ಜಂಕ್ಷನ್‌ನಿಂದ ಡಿ. 10, 17, 24, 31 ಹಾಗೂ ಜನವರಿ 7 (ಶನಿವಾರ) ಸಂಜೆ 6.45ಕ್ಕೆ ಹೊರಟು ಮರುದಿನ ಮುಂಬಯಿಗೆ ಮಧ್ಯಾಹ್ನ 2.25ಕ್ಕೆ ತಲಪಲಿದೆ. ಥಾನೆ, ಪನ್ವೆಲ್, ರೋಹ, ಖೇಡ್, ಚಿಪುನ್, ಸಂಗಮೇಶ್ವರ ರೋಡ್, ರತ್ನಗಿರಿ, ಕಂಕಾವಿ, ಸಿಂಧುದುರ್ಗ, ಕುಡಾಳ್, ಸಾವಂತವಾಡಿ ರೋಡ್, ತಿವಿಮ್, ಕರ್ಮಾಲಿ, ಮಡಗಾಂವ್, ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್‌ಗಳಲ್ಲಿ ನಿಲುಗಡೆ ಇದೆ.