ಹಾಲಿವುಡ್ ನಟಿ ಕ್ರಿಸ್ಟಿ ಆ್ಯಲೆ ನಿಧನ

(ನ್ಯೂಸ್ ಕಡಬ) newskadaba.com ಫ್ಲೋರಿಡಾ, ಡಿ. 06. ಎರಡು ಬಾರಿ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಹಾಲಿವುಡ್‌ ನಟಿ ಕ್ರಿಸ್ಟಿ ಆ್ಯಲೆ(71) ನಿಧನರಾಗಿದ್ದಾರೆ.

ಹಲವು ತಿಂಗಳುಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರು, ಫ್ಲೋರಿಡಾದ ಮೊಫಿಟ್ ಕ್ಯಾನ್ಸರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದೆನ್ನಲಾಗಿದೆ. 1987 ರಿಂದ 1993 ರವರೆಗೆ ಅವರು ನಟಿಸಿದ ಎನ್‌ಬಿಸಿ ಸಿಟ್‌ಕಾಮ್ ‘ಚೀರ್ಸ್’ ನಲ್ಲಿ ರೆಬೆಕ್ಕಾ ಹೋವ್ ಆಗಿ ಅಲ್ಲೆ ಅವರ ನಟನೆಗೆ 1991 ರಲ್ಲಿ ಎಮ್ಮಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದರು. ಇದಾದ ಬಳಿಕ 1994 ರಲ್ಲಿ ದೂರದರ್ಶನ ಚಲನಚಿತ್ರ ‘ಡೇವಿಡ್ಸ್ ಮದರ್’ ಗಾಗಿ ತಮ್ಮ ಎರಡನೇ ಬಾರಿಗೆ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 1980 ಮತ್ತು 1990 ರ ದಶಕಗಳಲ್ಲಿ ಅಲ್ಲೆ ಅವರು ‘ಲುಕ್ ಹೂಸ್ ಟಾಕಿಂಗ್’, ‘ಇಟ್ ಟೇಕ್ಸ್ ಟು’, ‘ಡಿಕನ್ಸ್ಟ್ರಕ್ಟಿಂಗ್ ಹೆನ್ರಿ’ ಮತ್ತು ‘ಡ್ರಾಪ್ ಡೆಡ್ ಗಾರ್ಜಿಯಸ್’ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

error: Content is protected !!
Scroll to Top