ಆಲಂಕಾರು: ಮೆಸ್ಕಾಂ ಶಾಖಾ ಕಚೇರಿಯಲ್ಲಿ ಮೆಸ್ಕಾಂ ಸುರಕ್ಷಾ ಮಾಸಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ನ.21. ಸುರಕ್ಷತೆ ಎಂಬುವುದು ನಮ್ಮ ವೃತ್ತಿಯಲ್ಲಿ ಒಂದು ಕ್ಷಣ ಮರೆತರೆ ಜೀವನ ಪರ್ಯಂತ ಪಶ್ಚಾತ್ತಾಪ ಪಡಬೇಕಾದಿತು. ಇದಕ್ಕಾಗಿ ಸುರಕ್ಷತೆಯನ್ನು ನಮ್ಮ ವೃತ್ತಿಯ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಂಡಾಗ ಅಪಾಯ ಎಂಬುವುದು ಕನಸಲ್ಲು ಸುಳಿಯೋದಿಲ್ಲ ಎಂದು ಸುಳ್ಯ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದಿವಾಕರ್ ಹೇಳಿದರು.


ಆಲಂಕಾರು ಮೆಸ್ಕಾಂ ಶಾಖಾ ಕಚೇರಿಯಲ್ಲಿ ನಡೆದ ಮೆಸ್ಕಾಂ ಸುರಕ್ಷಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಲಾಖೆ ತನ್ನ ನೌಕರರ ಸುರಕ್ಷತೆಗಾಗಿ ಸುರಕ್ಷಾ ಸಾಮಾಗ್ರಿಗಳನ್ನು ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಜೊತೆಗೆ ಸುರಕ್ಷಾ ಮಾಸಾಚರಣೆಯಂತಹ ಹತ್ತು ಹಲವು ಕಾರ್ಯಕ್ರಮದ ಮೂಲಕ ಜಾಗೃತಿಯನ್ನು ಮೂಡಿಸುತ್ತಿದೆ. ಇಲಾಖಾ ನೌಕರರು ಇದರ ಸದುಪಯೋಗವನ್ನು ಪಡೆದುಕೊಂಡು ಭವ್ಯ ಭವಿಷ್ಯವನ್ನು ಭಧ್ರವಾಗಿರಿಸಿಕೊಳ್ಳಿ ಎಂದರು.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯ ರೈಲು ನಿಲ್ದಾಣ ಮರುನಾಮಕರಣಕ್ಕೆ ಮನವಿ

ಕಡಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಣೇಶ್ ಪಸಾದ್ ಮಾತನಾಡಿ, ನಮ್ಮ ಜೀವನದ ಸುರಕ್ಷತೆ ನಮ್ಮ ಕೈಯಲ್ಲಿದೆ. ಮೆಸ್ಕಾಂ ಕರ್ತವ್ಯದಲ್ಲಿ ಸುರಕ್ಷತೆ ಎಂಬ ಶಬ್ದದ ಅರ್ಥವನ್ನು ಒಂದು ಕ್ಷಣ ಮರತೆರೆ ಅಪಾಯ ಕಟ್ಟಿಟ್ಟ ಬುತ್ತಿ. ಸುರಕ್ಷಾ ಸಾಮಗ್ರಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಪಾಯ ಮುಕ್ತ ಕರ್ತವ್ಯ ನಿಮ್ಮದಾಗಲಿ ಎಂದರು.
ಆಲಂಕಾರು ಮೆಸ್ಕಾಂ ಶಾಖಾಧಿಕಾರಿ ಎಸ್.ಎಸ್.ಪಂಚಾಕ್ಷರಿ ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ಮೆಸ್ಕಾಂ ಶಾಖಾಧಿಕಾರಿ ರಮೇಶ್, ಆಲಂಕಾರು ಮೆಸ್ಕಾಂ ಮೇಲ್ವೀಚಾರಕ ಜೋಸೆಫ್ ಗೊನ್ಸಾಲ್ಸೀಸ್ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ಮಾರ್ಗದಾಳು ಗುರುಮೂರ್ತಿ ಸ್ವಾಗತಿಸಿ, ದಿನೇಶ್ ವಂದಿಸಿದರು. ರತ್ನಾ ಕಾರ್ಯಕ್ರಮ ನಿರೂಪಿಸಿದರು.

Also Read  ಉಡುಪಿ: 55 ಕೇಂದ್ರಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ➤ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ

error: Content is protected !!
Scroll to Top