ಬೆಳ್ತಂಗಡಿ: ಆಂಬ್ಯುಲೆನ್ಸ್ ವಾಹನ ಪಲ್ಟಿ ➤ ವೈದ್ಯ ಸೇರಿದಂತೆ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 05. ನಿಯಂತ್ರಣ ತಪ್ಪಿದ ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್, ಸೇತುವೆಯ ಬದಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ವೈದ್ಯರೋರ್ವರು ಸೇರಿದಂತೆ ಮೂವರು ಗಾಯಗೊಂಡ ಘಟನೆ ಭಾನುವಾರದಂದು ರಾತ್ರಿ ನಡೆದಿದೆ.

 

ಗಾಯಗೊಂಡವರನ್ನು ಡಾ.‌‌ನಿತಿನ್, ಕ್ಷ-ಕಿರಣ ತಜ್ಞ ರಿತೇಶ್ ಹಾಗೂ ಲ್ಯಾಬ್ ಟೆಕ್ನೀಷಿಯನ್ ಹುಝೈರ್ ಎಂದು ಗುರುತಿಸಲಾಗಿದೆ. ಡಾ.ನಿತಿನ್ ಅವರಿಗೆ ತಲೆಗೆ ಗಾಯ ಹಾಗೂ ಕೈ ಮೂಳೆ‌ ಮುರಿತಕ್ಕೊಳಗಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರು ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ಆಂಬುಲೆನ್ಸ್ ವಾಹನವು ಬಹುತೇಕ ನುಜ್ಜುಗುಜ್ಜಾಗಿದೆ ಎನ್ನಲಾಗಿದೆ.

error: Content is protected !!
Scroll to Top