ತನ್ನ ಕಾರು ಬೈಕಿಗೆ ಢಿಕ್ಕಿ ಹೊಡೆದರೂ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸದ ಶಾಸಕ ➤ ನೀನ್ಯಾವ ಸೀಮೆ ಎಂಎಲ್’ಸಿ ಎಂದು ತರಾಟೆಗೆತ್ತಿದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.04. ವಿಧಾನ ಪರಿಷತ್ ಸದಸ್ಯನ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಭಾನುವಾರದಂದು ಕೋಲಾರದಲ್ಲಿ ನಡೆದಿದೆ.

 

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ, ಎಂಎಲ್ಸಿ ಎನ್. ರವಿಕುಮಾರ್ ಅವರ ಕಾರು ಶಿವನಪುರ ನಿವಾಸಿ ಗೋಪಾಲ್ ಎಂಬವರ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಗೋಪಾಲ್‌ರನ್ನು ಎಂಎಲ್ಸಿ ರವಿಕುಮಾರ್ ಆಸ್ಪತ್ರೆಗೆ ದಾಖಲಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಎಂಎಲ್ಸಿ ರವಿಕುಮಾರ್ ರನ್ನು ತರಾಟೆಗೆತ್ತಿಕೊಂಡಿದ್ದು, ನೀನ್ಯಾವ ಸೀಮೆಯ ಎಂಎಲ್ಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಸಾರ್ವಜನಿಕರನ್ನು ಸಮಾಧಾನಪಡಿಸಿದ್ದಾರೆ.

Also Read  ಸಂಘಪರಿವಾರವು ವಿದ್ಯಾರ್ಥಿಗಳ ಮೂಲಕ ಕೋಮುಗಲಭೆ ನಡೆಸಲು ಸಂಚು ರೂಪಿಸುತ್ತಿದೆ ➤ ಆರೋಪಿಗಳ ಬಂಧನವಾಗದೇ ಇದ್ದಲ್ಲಿ "ಪುತ್ತೂರು ಚಲೋ"- ಕ್ಯಾಂಪಸ್ ಫ್ರಂಟ್

 

error: Content is protected !!
Scroll to Top