(ನ್ಯೂಸ್ ಕಡಬ) newskadaba.com ಮುಂಬೈ, ಡಿ. 04. ದೇಶದ ಮೊದಲ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್ ಸೇವೆಯು ಜನವರಿ 14ರಂದು ಮುಂಬೈನಲ್ಲಿ ಆರಂಭಿಸಲಾಗುತ್ತದೆ ಎಂದು ಬೃಹತ್ ಮುಂಬೈ ವಿದ್ಯುತ್ ಸರಬರಾಜು ಹಾಗೂ ಸಾರಿಗೆ ಸಂಸ್ಥೆ (ಬೆಸ್ಟ್) ಘೋಷಿಸಿದೆ.
ಈಗಾಗಲೇ ಅಶೋಕ್ ಲೇಲ್ಯಾಂಡ್ ಕಂಪನಿಯು ಬಸ್ ಸಿದ್ಧಪಡಿಸಿದ್ದು, ಸ್ವಿಚ್ ಮೊಬಿಲಿಟಿ ಎಂಬ ಹೆಸರಿನ ಈ ಬಸ್ ಅನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಮ್ಮುಖದಲ್ಲಿ ‘ಬೆಸ್ಟ್’ ಗೆ ಹಸ್ತಾಂತರಿಸಲಾಗಿದೆ. ಇನ್ನು ಮೊದಲ ಹಂತದಲ್ಲಿ ಕನಿಷ್ಠ 10 ಡಬಲ್ ಡೆಕ್ಕರ್ ಬಸ್ ನೀಡಲು ಚಿಂತನೆ ನಡೆಸಲಾಗಿದ್ದು, ಈ ತಿಂಗಳಿನಿಂದಲೇ ಮುಂಬೈನಲ್ಲಿ ವಿದ್ಯುತ್ ಚಾಲಿತ ಪ್ರೀಮಿಯಂ ಸಿಂಗಲ್ ಡೆಕ್ಕರ್ ಬಸ್ ಸೇವೆ ಆರಂಭವಾಗಲಿದೆ.